ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಂಪತಿ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಮರ್ಸಿಡೀಸ್ ಬೆಂಜ್ ಜಿಎಲ್ಇ 450 ಡಿ ಕಾರು ಇದಾಗಿದೆ. ಕಾರು ಖರೀದಿ ಬಳಿಕ ಪತ್ನಿ ಹರಿಪ್ರಿಯಾ ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಕಾರು ಖರೀದಿಸಿದ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಖರೀದಿ ಮಾಡಿರುವ ಹೊಸ ಕಾರು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಐಷಾರಾಮಿ ಸೌಲಭ್ಯಗಳೊಂದಿಗೆ ದುಬಾರಿ ಬೆಲೆ ಕಾರು ಇದಾಗಿದೆ. ಬೆಂಗಳೂರಿನಲ್ಲಿ ಈ ಕಾರಿನ ಬೆಲೆ 1.44 ಕೋಟಿ ಬೆಲೆ ಹೊಂದಿದೆ. ಈ ಕಾರಿನಲ್ಲಿ 1993 ಸಿಸಿ ಹಾಗೂ 2989 ಸಿಸಿ ಇಂಜಿನ್ ಬರುತ್ತದೆ. ಕಾರಿನ ಟಾಪ್ ಸ್ಪೀಡ್ 230 ಕಿ.ಮೀ ಆಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮೀಷನ್ನ ಈ ಕಾರು ಹೊಂದಿದೆ.