- ದರ್ಶನ್ ಅಂಡ್ ಗ್ಯಾಂಗ್ ನ ಖಾಕಿ ಕಸ್ಟಡಿ ಇಂದು ಅಂತ್ಯ
- ಇಂದು ಕೋರ್ಟ್ ಗೆ ದರ್ಶನ್ ಅಂಡ್ ಗ್ಯಾಂಗ್ ಹಾಜರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿ 17 ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಮತ್ತೆ ಕೋರ್ಟ್ಗೆ ಆರೋಪಿಗಳನ್ನ ಹಾಜರುಪಡಿಸಲಾಗುತ್ತೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ದರ್ಶನ್ ಮತ್ತು ಇತರ ಆರೋಪಿಗಳು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಹೋಗೋದು ಫಿಕ್ಸ್ ಅಂತಾ ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳ ಸೇರಿ ಆರೋಪಿಗಳ ಮನೆಯಲ್ಲಿ ಪೊಲೀಸರು ಮಹಜರು ಪೂರ್ಣ ಮಾಡಿದಾರೆ. ಈ ಪ್ರಕರಣಕ್ಕೆ ಬಳಸಿದ ಹಲವು ವಸ್ತುಗಳನ್ನು ಸೀಜ್ ಮಾಡಲಾಗಿದೆ. ಹೀಗಾಗಿ ಇಂದು ಕೋರ್ಟ್ ಹಾಜರುಪಡಿಸಿ ದರ್ಶನ್ ಅವರನ್ನು ಮತ್ತೆ ಕಸ್ಟಡಿಗೆ ಕೇಳೋದು ಡೌತ್ ಅಂತಾ ಹೇಳಲಾಗುತ್ತಿದೆ.
ಇಂದು ದರ್ಶನ್ ಆ್ಯಂಡ್ ಗ್ಯಾಂಗ್ನ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ನಿನ್ನೆಯೇ 17 ಆರೋಪಿಗಳಿಗೆ ಮೆಡಿಕಲ್ ಚೆಕಪ್ ನಡೆಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 17 ಮಂದಿಗೆ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಜೊತೆಗೆ ಡಿಎನ್ಎ ಟೆಸ್ಟ್ ಕೂಡ ನಡೆದಿದೆ. ಆರೋಪಿಗಳ ರಕ್ತ, ಕೂದಲಿನ ಮಾದರಿ ಸಂಗ್ರಹ ಮಾಡಲಾಗಿದ್ದು, ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗೂ ಮ್ಯಾಚ್ ಮಾಡಲಿದ್ದಾರೆ. ಒಂದು ವೇ ಎರಡಕ್ಕೂ ತಾಳೆ ಆದರೆ ಕೊಲೆ ಪ್ರಕರಣಕ್ಕೆ ಮತ್ತಷ್ಟು ಪ್ರಬಲ ಸಾಕ್ಷ್ಯ ಆಗಲಿದೆ.
ಆರೋಪಿಗಳಿಗೆ ಯಾವೆಲ್ಲಾ ಮೆಡಿಕಲ್ ಟೆಸ್ಟ್ ಮಾಡಲಾಯ್ತು ಅನ್ನೋದನ್ನ ನೋಡೋದಾದರೆ ಆರೋಪಿಯ ಎತ್ತರ ಅಳತೆ, ಆರೋಪಿಯ ತೂಕ, ಆರೋಪಿಯ ಕೂದಲಿನ ಸ್ಯಾಂಪಲ್, ರಕ್ತದ ಮಾದರಿ ಸೇರಿದಂತೆ ಕಣ್ಣಿನ ಪರೀಕ್ಷೆ ಮಾಡಲಾಗಿದೆ.