ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಇನ್ನೂ ಹದಿನೈದು ಮಂದಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ನಟ ದರ್ಶನ್ ಈ ಪ್ರಕರಣದಲ್ಲಿ ಜೈಲು ಸೇರುತ್ತಿದ್ದಂತೆ ಅವರು ಆಪ್ತರು, ಕುಟುಂಬದವರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ದರ್ಶನ್ ಸಹೋದರ ಆಗಲಿ, ತಾಯಿಯಾಗಲಿ ಠಾಣೆಗೆ ಭೇಟಿ ನೀಡಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಬಂಧನ ಆದ ದಿನವೇ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದರು. ಆದರೆ ಇದೀಗ ಮತ್ತೆ ಸಕ್ರಿಯಗೊಳಿಸಿದ್ದಾರೆ.
ವಿಜಯಲಕ್ಷ್ಮಿ ಅವರು ತಮ್ಮ ಹಳೆ ಖಾತೆಯನ್ನೇ ಮತ್ತೆ ಸಕ್ರಿಯಗೊಳಿಸಿದ್ದಾರೆ. ಆದರೆ ತಾವು ಮಾಡಿದ್ದ ಎಲ್ಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್ಫಾಲೋ ಮಾಡಿದ್ದಾರೆ. ಮತ್ತೆ ಸಕ್ರಿಯಗೊಳಿಸದಮೇಲೆ ಹಳೆಯ ಹೆಸರನ್ನೇ ಮುಂದುವರೆಸಿದ್ದಾರೆ. ಖಾತೆ ಹೆಸರು ‘ವಿಜಿ ದರ್ಶನ್’ ಎಂದೇ ಇದೆ. ಬಯೋನಲ್ಲಿ ವಿಜಯಲಕ್ಷ್ಮಿ ದರ್ಶನ್ ಎಂದಿದೆ. ಆದರೆ ಪ್ರೊಫೈಲ್ ಚಿತ್ರ, ಮಾಡಲಾಗಿದ್ದ ಪೋಸ್ಟ್ಗಳೆಲ್ಲವನ್ನೂ ಸಹ ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ.