- ಮೈಸೂರಲ್ಲಿ ಫಿಲ್ಮ್ಸಿಟಿ ಆಗಬೇಕು ಅನ್ನೋದು ಅಣ್ಣಾವ್ರ ಕನಸು
- ಕನ್ನಡ ಚಿತ್ರರಂಗದ ಪರ ನಾನು ಯಾವತ್ತೂ ಇದ್ದೇನೆ
ಚಿತ್ರಮಂದಿರಗಳು ಮತ್ತು ಸಬ್ಸಿಡಿ ಬಗ್ಗೆ ಗಮನ ಹರಿಸಿ, ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ನಂತರ ಮಾತನಾಡಿದ ಅವರು ಕನ್ನಡ ಚಿತ್ರರಂಗ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರವನನು ಸರ್ಕಾರದಿಂದ ನೀಡಲಾಗುವುದ. ಇನ್ಮುಂದೆ ಪ್ರತಿವರ್ಷ ರಾಜ್ಯಸರ್ಕಾರದ ವತಿಯಿಂದ ನಡೆಯುವ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮ ಆಯಾ ವರ್ಷವೇ ನಡೆಯುವಂತೆ ನೋಡಿಕೊಳ್ತೀವಿ ಎಂದರು.
ಕನ್ನಡದಲ್ಲಿ ಓಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜೊತೆ ಮಾತನಾಡುತ್ತೀನಿ. ಡಾ. ರಾಜ್ಕುಮಾರ್ ಕನಸಿನಂತೆ ಖಂಡಿತಾ ಒಂದು ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು. ಕನ್ನಡ ಚಿತ್ರರಂಗದ ಬೆಳವಣಿಗೆ ಪರ ನಾನು ಯಾವತ್ತೂ ಇದ್ದೇನೆ. ಮುಂದೆನೂ ಇರ್ತೇನೆ ಎಂದ ಸಿಎಂ ಸಿದ್ದರಾಮಯ್ಯ ತಿಳಿಸಿದರು.