ಕರ್ನಾಟಕ ಸರ್ಕಾರ ಬೀಳಲಿದೆ ಎಂಬ ಏಕನಾಥ್ ಶಿಂಧೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾವು ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ತೇವೆ. ಅವರ ಪ್ರಯತ್ನ ಸಫಲ ಆಗೋದಿಲ್ಲ. ಅದಕ್ಕೆ ಅವರು ಹತಾಶರಾಗಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಬೀಳಿಸೋ ಮಾತನ್ನಾಡ್ತಿದ್ದಾರೆ. ಸರ್ಕಾರ ಬೀಳಲಿದೆ ಎಂಬುದು ಬಿಜೆಪಿಯವರ ಭ್ರಮೆ. ಆಪರೇಷನ್ ಕಮಲ ಸಾಧ್ಯ ಇಲ್ಲ. ಅವರು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಲಿದ್ದಾರೆ. ಈ ಬಾರಿ ಎನ್ಡಿಎ ಸೋಲಲಿದೆ. ಈಗಾಗಲೇ ಅವರು ಕಳೆದ ಒಂದು ವರ್ಷದಿಂದ ಪ್ರಯತ್ನ ಮಾಡಿ ವಿಫಲ ಆಗಿದ್ದಾರೆ. ಈಗಲೂ ಮಾಡ್ತಾನೆ ಇದ್ದಾರೆ. ಅಂತಹ ಪ್ರಯತ್ನ ಯಶಸ್ವಿಯಾಗೋದಿಲ್ಲ ಎಂದರು.
ಬೆಂಗಳೂರು ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿ ರಾಮೋಜಿಗೌಡ, ಡಿ.ಟಿ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಕೈ ನಾಯಕರಿಂದ ಒಗ್ಗಟ್ಟು ಪ್ರದರ್ಶಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಅವರು, ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿದೆ. ರಾಮೋಜಿಗೌಡ, ಡಿ.ಟಿ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ನಾವು ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಿದ್ದೇವೆ. ನಾನು, ಡಿ.ಕೆ ಶಿವಕುಮಾರ್, ಮುನಿಯಪ್ಪ, ರಾಮಲಿಂಗರೆಡ್ಡಿ , ಮಧುಬಂಗಾರಪ್ಪ ಜೊತೆಗೆ ತೆರಳಿ ನಾಮಪತ್ರ ಸಲ್ಲಿಸಿದ್ದೇವೆ. ನನಗೆ ಇರುವ ಮಾಹಿತಿ ಪ್ರಕಾರ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ತಾರೆ ಎಂದು ಹೇಳಿದರು.