ಬೆಂಗಳೂರಿನಲ್ಲಿ ಮತ್ತೊಂದು ಮಾನಗೇಡಿ ಕೃತ್ಯ ನಡೆದಿದ್ದು, ಯುವತಿ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿ, ಯುವತಿ ಬಳಿ ಇದ್ದ ಚಿನ್ನಾಭರಣ, ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಯುವತಿಯೋರ್ವಳು ಎಸ್ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಿನ್ನೆ ( ಜನವರಿ 19) ರ ರಾತ್ರಿ ಬೆಳಕಿಗೆ ಬಂದಿದೆ.
ರಾತ್ರಿ 11.30 ರ ಸುಮಾರಿಗೆ ಯಲಹಂಕಗೆ ಹೋಗಲು ಬಸ್ ಗಾಗಿ ಕೆಆರ್ ಮಾರುಕಟ್ಟೆಯಲ್ಲಿ ಯುವತಿ ಕಾಯುತ್ತಿರುವಾಗ ಕಾರಿನಲ್ಲಿ ಬಂದ ಇಬ್ಬರು ಯುವಕರು ಆಕೆಯ ಬಳಿ ಎಲ್ಲಿಗೆ ಹೋಗಬೇಕು, ಡ್ರಾಪ್ ಏನಾದ್ರೂ ಬೇಕಾ ಎಂದು ಕೇಳಿದ್ದಾರೆ. ಈ ವೇಳೆ ಯುವತಿ ಡ್ರಾಪ್ ಬೇಡ, ಬಸ್ ನಿಲ್ದಾಣ ಎಲ್ಲಿದೆ ಎಂದು ಕೇಳಿದ್ದಾಳಂತೆ. ನಂತರ ಬಸ್ ಸ್ಟ್ಯಾಂಡ್ ಗೆ ಬಿಡ್ತೀವಿ ಬನ್ನಿ ಅಂತ ಕಾರಿನಲ್ಲಿ ಹತ್ತಿಸಿಕೊಂಡರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡ ನಂತರ ಮಾರುಕಟ್ಟೆ ಮೂಲಕ ಬೇರೊಂದು ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಸದ್ಯ ಸಂತ್ರಸ್ತ ಯುವತಿಯಿಂದ ಎಸ್ ಜೆ ಪಾರ್ಕ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಪರಿಶೀಲನೆಗೆ ಮುಂದಾಗಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿಟಿವಿಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.
ತಮಿಳುನಾಡಿನಿಂದ ಅಣ್ಣನ ಮನೆಗೆಂದು ಬಂದಿದ್ದ ಯುವತಿ, ಯಲಹಂಕಾ ಬಸ್ಸಿಗಾಗಿ ಕೆಆರ್ ಮಾರುಕಟ್ಟೆಯಲ್ಲಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಮಹಿಳೆಗೆ ಬಸ್ ತೋರಿಸುವುದಾಗಿ ನಂಬಿಸಿ ಗೋಡೌವ್ನ್ ಸ್ಟ್ರೀಟ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವುದಾಗಿ ಯುವತಿ ಆರೋಪಿಸಿ ದೂರು ನೀಡಿದ್ದಾಳೆ. ಮಾತ್ರವಲ್ಲ ಇಬ್ಬರು ಸೇರಿ ಅತ್ಯಾಚಾರ ಎಸಗಿ ಬಳಿಕ ಮಹಿಳೆಯ ಮೊಬೈಲ್, ಹಣ, ತಾಳಿ, ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ ಎಂದು ಕೂಡ ದೂರು ನೀಡಿದ್ದಾಳೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ; https://whatsapp.com/channel/0029VafyCqRFnSzHn1JWKi1B