ಬೆಂಗಳೂರು : ಸಾಲ ತೀರಿಸಲು, ಶೋಕಿ ಜೀವನ ನಡೆಸಲು, ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ ಮಾಡಿದ್ದಾಳೆ. ಮೇ 10 ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ಕೊಲೆ ಮಾಡಿ 36 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಾಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ದಿವ್ಯಾ ಕೊಲೆಯಾದ ಮಹಿಳೆ. ಮೋನಿಕಾ (24) ಬಂಧಿತ ಆರೋಪಿ. ಶೋಕಿ ಜೀವನಕ್ಕಾಗಿ ಮನೆ ಮಾಲಕಿಯನ್ನೇ ಹತ್ಯೆ ಮಾಡಿದ ದಿವ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದಾಗ ಕೊಲೆಯ ಹಿನ್ನೆಲೆ ತಿಳಿದುಬಂದಿದೆ.