- ದರ್ಶನ್ ಲ್ಯಾಂಬೋರ್ಗಿನಿಗೆ ದುಡ್ಡು ಕೊಟ್ಟಿದ್ದು ನಾನೇ
- ದರ್ಶನ್ ಅಭಿಮಾನಿಗಳಿಗೆ ಉಮಾಪತಿ ತಿರುಗೇಟು
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರಾಬರ್ಟ್ ಹಾಗೂ ಹೆಬ್ಬುಲಿ ಅಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಉಮಾಪತಿ ಹಾಗೂ ನಟ ದರ್ಶನ್ ನಡುವೆ ಮಾತಿನ ಚಕಮಕಿ ಆಗಾಗ ನಡಿಯುತ್ತಲೇ ಇರುತ್ತದೆ. ಇವರ ಮಧ್ಯ ಇರುವ ಮುನಿಸು ಎಲ್ಲರಿಗೂ ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಇದರ ಕುರಿತು ಉಮಾಪತಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಉಮಾಪತಿ ‘ಕಾಟೇರ’ ಸಿನಿಮಾಗೆ ಟೈಟಲ್ ಕೊಟ್ಟಿದ್ದು ನಾನೇ ಎಂದಿದ್ದರು. ಇದ್ದಕ್ಕೆ ನಟ ದರ್ಶನ್ “ಅಯ್ಯೋ ತಗಡೇ” ಎಂದು ಉಮಾಪತಿಗೆ ತಿರುಗೇಟು ನೀಡಿದ್ದರು. ಆಗ ತಗಡಿಗೂ ಚಿನ್ನದ ಬೆಲೆ ಬರುತ್ತೆ ಎಂದಿದ್ರು ಉಮಾಪತಿ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಿದ್ದಂತೆ ತಗಡಿಗೂ ಚಿನ್ನದ ಬೆಲೆ ಬರುತ್ತದೆ ಎಂದ ಹೇಳಿಕೆ ಸಖತ್ ಸದ್ದು ಮಾಡ್ತಿದೆ.
ಇದರ ಬೆನ್ನಲೇ ಅಭಿಮಾನಿಗಳು ನಿರ್ಮಾಪಕ ಉಮಾಪತಿಗೆ ನಮ್ಮ ಬಾಸ್ ನಿಂದ ನೀವು ದುಡ್ಡು ಮಾಡಿಕೊಂಡ್ರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡ್ತಿದ್ರು. ಇದಕ್ಕೆ ಉಮಾಪತಿ ಉತ್ತರಿಸಿದ್ದಾರೆ. ನಾನು ದುಡ್ಡು ಮಾಡಿದ್ದ ಮೇಲೆ ನಿಮ್ಮ ಬಾಸ್ ಗೆ ದುಡ್ಡು ಕೊಟ್ಟು ಸಿನಿಮಾ ಮಾಡಿಸಿದ್ದು. ಅವರತ್ರ ಬಿಟ್ಟಿ ಕೆಲಸ ಮಾಡಿಸಿಕೊಂಡಿಲ್ಲ. ಅವ್ರು ಏನು ಲ್ಯಾಂಬೋರ್ಗಿನಿ ಅಂತಾರಲ್ಲ ಆ ಲ್ಯಾಂಬೋರ್ಗಿನಿ ತೊಗೊಳೋದಿಕ್ಕೆ ಅಡ್ವಾನ್ಸ್ ಕೊಟ್ಟಿದ್ದೇ ನಾನೇ ಎಂದು ಅಭಿಮಾನಿಗಳಿಗೆ ಉಮಾಪತಿ ತಿಳಿಸಿದ್ದಾರೆ.