ರಾಜ್ಯದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಘೀ ಕೂಡ ಹೆಚ್ಚಾಗ್ತಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 5187 ಡೆಂಘೀ ಪ್ರಕರಣಗಳು ಪತ್ತೆಯಾಗಿದೆ. ಜನರು ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಡೆಂಘೀ ಜ್ವರ ಹೆಚ್ಚಾಗ್ತಿದೆ.
ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಕರಣಗಳು:
ಬೆಂಗಳೂರಿನಲ್ಲಿ- 1230 ಪ್ರಕರಣ
ಹಾವೇರಿ- 389 ಪ್ರಕರಣ
ಮೈಸೂರು -358 ಪ್ರಕರಣ
ಚಿಕ್ಕಮಗಳೂರು- 346 ಪ್ರಕರಣ
ಕಲಬುರಗಿ -153 ಪ್ರಕರಣ
ಡೆಂಘೀ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಜನರಲ್ಲಿ ನೆಗಡಿ ಜ್ವರದಿಂದ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧೇಡೆ ಡೆಂಘೀ ಜ್ವರ ಹಾವಳು ಇಟ್ಟಿದೆ. ಇನ್ನೂ ಜೂನ್ ತಿಂಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಇವರೆಗೂ ರಾಜ್ಯದಲ್ಲಿ 37,144 ಜನರ ರಕ್ತ ಮಾದರಿ ಪಡೆಯಲಾಗಿದ್ದು, 3975 ಮಂದಿಗೆ ಪಾಸಿಟಿವ್ ಬಂದಿದೆ. ಇದುವರೆಗೆ 5187 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.