ರಾಜ್ಯದಲ್ಲಿ ಒಂದು ಕಡೆ ಡೆಂಗ್ಯೂ ಆತಂಕ ಎದುರಾದ್ರೆ ಮತ್ತೊಂದು ಕಡೆ ಈ ಮಂಕಿ ಫಾಕ್ಸ್ ಭೀತಿ ಎದುರಾಗಿದೆ. ಈಗಾಗಲೇ ವಿಶ್ವ ಅರೋಗ್ಯ ಸಂಸ್ಥೆ ಮಂಕಿ ಫಾಕ್ಸ್ ಅನ್ನು ಅರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಅಲರ್ಟ್ ಆಗಿರೋಕೆ ಸೂಚನೆ ನೀಡಿದೆ. ಇನ್ನು ಅದೇ ರೀತಿ ರಾಜ್ಯದಲ್ಲೂ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಎಲ್ಲಾ ಏರ್ಪೋರ್ಟ್ ಹಾಗೂ ಪ್ರಮುಖ ಸ್ಥಳದಲ್ಲಿ ಅಲರ್ಟ್ ಆಗಿರೋಕೆ ಸೂಚನೆ ನೀಡಿದೆ.
ಇನ್ನು ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್. ಬೆಂಗಳೂರು ಹಾಗೂ ಮಂಗಳೂರು ಅಲ್ಲಿ ಅಲರ್ಟ್ ಮಾಡಿದ್ದೇವೆ. ಬೆಂಗಳೂರು ಅಲ್ಲಿ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ರಿಸೆರ್ವೆ ಮಾಡಿದ್ದೇವೆ. ಮಂಗಳೂರು ಅಲ್ಲೋ ಮೆಗ್ಗನ್ ಹಾಸ್ಪಿಟಲ್ ರಿಸೆರ್ವೆ ಮಾಡಿದ್ದೇವೆ. ಇನ್ನು ಜಿಲ್ಲೆಗಳಲ್ಲಿ ಅಲರ್ಟ್ ಅಲರ್ಟ್ ಆಗಿರೋಕೆ ಹೇಳಿದ್ದೇವೆ ಎಂದು ಹೇಳಿದ್ರು