ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಅವರು ಸುದ್ದಿಗೋಷ್ಠಿ ನಡೆಸಿದ್ದು, ಹಲವು ವಿಚಾರಗಳನ್ನು ಹೊರಹಾಕಿದ್ದಾರೆ. ಅಲ್ಲದೆ ಈ ಎಲ್ಲಾ ಪ್ರಕರಣದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾತ್ರ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಡಿಕೆಶಿಯದ್ದು ಎನ್ನಲಾದ ಆಡಿಯೋವನ್ನು ಪ್ಲೇ ಮಾಡಿದ್ದಾರೆ. ಜತೆಗೆ ಎಸ್ಐಟಿ ಮೇಲೆ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಈ ಎಲ್ಲ ಸಾಕ್ಷಿಗಳನ್ನು ನೇರವಾಗಿ ಸಿಬಿಐಗೆ ನೀಡುವುದಾಗಿ ಹೇಳಿದ್ದಾರೆ.
ಪೆನ್ ಡ್ರೈವ್ ಕಥಾನಾಯಕರೇ ಡಿಸಿಎಂ ಡಿಕೆ ಶಿವಕುಮಾರ್ ಆಗಿದ್ದಾರೆ. ನನಗೆ ಕ್ಯಾಬಿನೆಟ್ ರ್ಯಾಂಕ್ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಪೆನ್ ಡ್ರೈವ್ ಹೇಗೆ ರೆಡಿ ಆಯಿತು. ಹೊಳೆನರಸೀಪುರಕ್ಕೆ ಹೇಗೆ ಹೋಯಿತು..? ಶ್ರೇಯಸ್ಗೆ ಏನೆಲ್ಲಾ ಡೈರೆಕ್ಷನ್ ಇತ್ತು? ಎಲ್ಲವೂ ನನಗೆ ಗೊತ್ತು ಎಂದು ದೇವೇರಾಜೇಗೌಡ ಹೇಳಿದರು.
ಇನ್ನು ಮಾಜಿ ಸಚಿವ ಎಲ್ ಆರ್ ಶಿವರಾಮೇಗೌಡ ಕರೆ ಮಾಡಿ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರನ್ನು ಹೇಳಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ಆಡಿಯೋವನ್ನು ಬಿಡುಗಡೆ ಮಾಡಿದರು. ಈ ಪ್ರಕರಣದಲ್ಲಿ ಶಿವರಾಮೇಗೌಡ ಮಧ್ಯವರ್ತಿಯಾಗಿದ್ದಾರೆ. ಡಿ ಕೆ ಶಿವಕುಮಾರ್ ಪರವಾಗಿ ಕೆಲಸ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದರು.
ಪೆನ್ ಡ್ರೈವ್ ಹಂಚಿರುವವರ ಹೆಸರು, ಲೋಕೇಶನ್ ಹಾಗೂ ಪೋನ್ ನಂಬರ್ಗಳನ್ನು ಕೊಟ್ಟರೂ ಆರೋಪಿಗಳನ್ನು ಹಿಡಿಯಲಿಲ್ಲ. ಈಗ ದೇವರಾಜೇಗೌಡನನ್ನು ನನ್ನ ಫಿಟ್ ಮಾಡಬೇಕು ಅಂತ ಈ ತಂತ್ರ ಮಾಡಿದ್ದಾರೆ. ನಿನ್ನೆಯವರೆಗೂ ನನ್ನ ಜತೆ ಶಿವರಾಮೇಗೌಡರು ಸಂಧಾನ ಮಾಡಲು ಮಂದಾದರು. ನನಗೆ ಕ್ಯಾಬಿನೆಟ್ ದರ್ಜೆ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟರು. ಇದಕ್ಕಾಗಿ ನನಗೆ ಸರ್ಕಾರದ ಸಿಎಂ. ಡಿಸಿಎಂ ಹೆಸರು ತರಬೇಡಿ ಎಂದು ತಾಕೀತು ಮಾಡಿದರು. ನಾನು ಅದನ್ನು ನಿರಾಕರಣೆ ಮಾಡಿದೆ ಎಂದು ದೇವೇರಾಜೇಗೌಡ ಹೇಳಿದರು.
ಈ ಪ್ರಕರಣ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆಶಿವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಸಭೆ ನಡೆದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರನ್ನೆಲ್ಲಾ ಬಂಧಿಸಬೇಕು. ತನಿಖೆ ಯಾವ ನಿಟ್ಟಿನಲ್ಲಿ ಸಾಗಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ನನ್ನ ಜೀವನದ ದೊಡ್ಡ ಹೋರಾಟ ಇದ್ದಿದ್ದು ಹಾಸನದ ನಾಯಕರ ವಿರುದ್ಧವಾಗಿ ಹೋರಾಟ ಮಾಡುವುದು. ನನ್ನ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನನ್ನಹೋರಾಟವನ್ನು ಕೆಲವು ಕಿಡಿಗೇಡಿ ರಾಜಕಾರಣಿಗಳು ವಾಮಮಾರ್ಗದಲ್ಲಿ ಬಳಸಿದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದರು.