ಅಕ್ರಮ ಆಸ್ತಿ ಗಳಿಕೆ ಆರೋಪ ಲೋಕಾಯುಕ್ತದವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದ ಹಿನ್ನೆಲೆ ಗುರುವಾರ ಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದರು.
ಲೋಕಾಯುಕ್ತ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದವರು ನಿನ್ನೆ ಸಮನ್ಸ್ ಕೊಟ್ಟಿದ್ದರು. ನಿನ್ನೆ ನಾನು ಬಾಗಿನ ಅರ್ಪಿಸೊಕೆ ಆಲಮಟ್ಟಿ ಹೋಗಿದ್ದರಿಂದ ಹೋಗೊಕೆ ಆಗಿರಲಿಲ್ಲ ಎಂದರು.
ಇವತ್ತು ರಿಕ್ವೆಸ್ಟ್ ಮಾಡಕೊಂಡಿದ್ದೆ ಬರ್ತೀನಿ ಅಂತಾ. ಸುಮಾರು ಎರಡು ಗಂಟೆಗಳ ಕಾಲ ತನಿಖೆ ನಡೆಸಿ ಪ್ರಶ್ನೇ ಮಾಡಿ ವಿಚಾರಣೆ ನಡೆಸಿದರು. ಅದಕ್ಕೆ ಉತ್ತರ ಎಲ್ಲಾ ಕೊಟ್ಟಿದ್ದಿನಿ. ಇನ್ನು ಕೆಲವು ದಾಖಲೆಗಳನ್ನಾ ಕೇಳಿದ್ದಾರೆ ಅದನ್ನು ಕೊಡ್ತೀನಿ ಎಂದು ಹೇಳಿದರು.
ಅವರು ಇನ್ನೂ ಸ್ಟಡಿ ಮಾಡಿ ನೋಟಿಸ್ ಇಶ್ಯೂ ಮಾಡತ್ತಿನಿ ಅಂದಿದ್ದಾರೆ. ಒಂದೇನಪ್ಪಾ ಅಂದರೆ ಇವರಿಗಿಂತಾ ಸಿಬಿಐನವರೇ ಪರವಾಗಿಲ್ಲ. ಇವರು ಅಷ್ಟೋಂದು ಬೇರೆ ಬೇರೆ ವಿಚಿತ್ರ ಪ್ರಶ್ನೆಗಳನ್ನೆಲ್ಲಾ ಕೇಳಿದ್ದಾರೆ. ಸಿಬಿಐನವರು ನನಗೆ ಇನ್ನು ಏನು ಕೇಳೆ ಇಲ್ಲ. ಒಂದು ದಿನಾನು ಕರಿಲಿಲ್ಲ ಇವರೂ ಆಗಲೇ ಕರೆದು ಹಿಂಸೆ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆಸ್ತಿಗೆ ಸಂಬಂಧಪಟ್ಟಂತೆ ಏನೆಲ್ಲಾ ಡಾಕ್ಯುಮೆಂಟ್ ಕೇಳಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಅವೇಲ್ಲಾ ನಾನು ಎನು ಹೇಳಕ್ಕಾಗಲ್ಲ ಎಂದು ಉತ್ತರಿಸದೇ ಹೋದರು.