- ಬಿಜೆಪಿ ವಿರುದ್ಧ ಸುಳ್ಳು ಜಾಹಿರಾತು ಆರೋಪ
- ಬಿಜೆಪಿ ಭ್ರಷ್ಟ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು
ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿಗೆ ಧಕ್ಕೆ ತಂಡ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾದರು.
ಈ ಸಂಬಂಧ ಕೋರ್ಟ್ ವಿಚಾರಣೆ ಬಳಿಕ ಡಿಕೆ ಶಿವಕುಮಾರ್ ಮಾತನಾಡಿದ್ದು, ನಾನು ಸಿಎಂ ಅವರು ಇಂದು ಕೋರ್ಟ್ಗ ಆಗಮಿಸಿದ್ದೇವು. ಇಂಡಿಯಾ ಸಭೆ ಇದ್ದಿದ್ದರಿಂದ ರಾಹುಲ್ ಬರಲು ಆಗಿಲ್ಲ. ಬಿಜೆಪಿ ಭ್ರಷ್ಟ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು. ಸಿಎಂ ಹುದ್ದೆಗೆ 2500 ಕೋಟಿ ಎಂದು ವಿವಿಧ ಹುದ್ದೆಗೆ ರೇಟು ಫೀಕ್ಸ್ ಮಾಡಿದ್ರು. ಪತ್ರಿಕೆಯಲ್ಲಿ ರೇಟ್ ಪ್ರಕಟ ಆಗಿತ್ತು. ಯತ್ನಾಳ್ ನೀಡಿದ ಹೇಳಿಕೆಯನ್ನು ನಾವು ಜಾಹಿರಾತು ನೀಡಿದ್ದೇವು. ಬಿಜೆಪಿಯವರು ನಮಗೆ ರಾಜಕೀಯ ಮಾಡಲು ಕರೆಯುತ್ತಿದ್ದಾರೆ. ಆದರೆ ನಾವು ಸುಮ್ಮನೆ ಕೂರಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್ ಕೇಶವಪ್ರಸಾದ್ ಈ ಸಂಬಂಧ ಸಲ್ಲಿಸಿರುವ ಖಾಸಗಿ ದೂರನ್ನು ಶಾಸಕರು ಸಂಸದರ ವಿರುದ್ಧ ಕ್ರಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ 42 ನೇ ಎಸಿಎಂಎಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ಆರೋಪಿಗಳ ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶದು ದಿನಾಂಕ ತಿಳಿಸುವುದಾಗಿ ಹೇಳಿದರು.