ಭಾರತೀಯ ರೈಲ್ವೇಯು ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಜುಲೈ 31 ರಂದು ಪ್ರಾರಂಭಿಸಲು ಸಜ್ಜಾಗಿದೆ. ಕರ್ನಾಟಕ, ಅದರಲ್ಲೂ ಬೆಂಗಳೂರಿನ ಹಾಗೂ ಕೇರಳ ಪ್ರಯಾಣಿಕರಿಗೆ ಬಹಳ ಪ್ರಯೋಜನವಾಗಲಿದೆ. ಈ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ವಾರಕ್ಕೆ ಮೂರು ಬಾರಿ ಉಭಯ ನಗರಗಳ ಮಧ್ಯೆ ಸಂಚರಿಸಲಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ನೀಡುವುದು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೈಲು ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
8 ಕೋಚ್ಗಳ ವಿಶೇಷ ರೈಲು
ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ಎಂಟು ಕೋಚ್ಗಳನ್ನು ಹೊಂದಿರಲಿದೆ. ಇದು ಸೆಮಿ-ಹೈ-ಸ್ಪೀಡ್ ರೈಲು ಆಗಿರುತ್ತದೆ.
ರೈಲು ಹೊರಡುವ, ತಲುಪುವ ಸಮಯ ವಿವರ
ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷ ರೈಲು ಎರ್ನಾಕುಲಂ ಜಂಕ್ಷನ್ನಿಂದ (ERS) ಮಧ್ಯಾಹ್ನ 12:50 ಕ್ಕೆ ಪ್ರಯಾಣವನ್ನು ಆರಂಭಿಸಿ ರಾತ್ರಿ 10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ. ರೈಲು ಬೆಂಗಳೂರಿನಿಂದ ಬೆಳಗ್ಗೆ 5:30ಕ್ಕೆ ಹೊರಟು 2.20 ಕ್ಕೆ ಎರ್ನಾಕುಲಂ ತಲುಪಲಿದೆ.