ಏತ ನೀರಾವರಿ ಯೋಜನೆಗಳಲ್ಲಾದ ಭ್ರಷ್ಟಾಚಾರವನ್ನು ಹೊರಗೆ ತರಲು ಡಿಸಿಎಂ ಡಿಕೆ ಶಿವಕುಮಾರ್ ಹೊಸ ತಂತ್ರವನ್ನು ಹೂಡಿದ್ದಾರೆ.. ಜಲ ಸಂಪನ್ಮೂಲ ಇಲಾಖೆಯ ಏತ ನೀರಾವರಿ ಯೋಜನೆಗಳ ಆಡಿಟ್ ನಡೆಸಲು ಸರ್ಕಾರ ಸಮಿತಿ ರಚಿಸಿದೆ. ಅದರಲ್ಲೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆಡಿಟ್ ನೆಪದಲ್ಲಿ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ವಿರುದ್ಧ ಡಿಸಿಎಂ ಡಿಕೆಶಿ ತಂತ್ರ ರೂಪಿಸಿದ್ದಾರೆ.. ಈಗಾಗಲೇ ಬಿಜೆಪಿ, ಜೆಡಿಎಸ್ ನ ಹಗರಣಗಳ ತನಿಖೆಗೆ ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಏತ ನೀರಾವರಿ ಯೋಜನೆಗಳಲ್ಲಿ ನಡೆದ ಭ್ರಷ್ಟಾಚಾರದ ಶೊಧಕ್ಕೆ ಮುಂದಾಗಿದೆ.