ಇದು ಹಬ್ಬ ಹರಿದಿನಗಳ ಮಾಸ. ಸದ್ಯದಲ್ಲೇ ಗಣೇಶ ಹಬ್ಬ ಬರುತ್ತಿದೆ. ನಾಡಿನಾದ್ಯಂತ ಜನರು ಗಣೇಶ ಹಬ್ಬದ ಆಚರಣೆಗೆ ತಯಾರಾಗುತ್ತಿದ್ದಾರೆ. ಆದರೆ ಗಣೇಶ ಚತುರ್ಥಿಗೂ ಮುನ್ನ ಪೊಲೀಸ್ ಇಲಾಖೆ ನಿಯಮ ಪಾಲಿಸುವಂತೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಗೈಡ್ಲೈನ್ಸ್ ಅನುಗುಣವಾಗಿ ಹಬ್ಬವನ್ನು ಆಚರಿಸಬೇಕಿದೆ.
ಗೌರಿ ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆ ಯಿಂದ ಗೈಡ್ ಲೈನ್ಸ್ ಬಿಡುಗಡೆ
- ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅನುಮತಿ ಕಡ್ಡಾಯ.
- ಗಣೇಶ ಮೂರ್ತಿ ಪ್ರತಿಷ್ಟಾಪನೆಯಿಂದ ಸಾರ್ವಜನಿಕ ವಾಹನಗಳಿಗೆ ತೊಂದರೆ ಯಾಗಬಾರದು, ಸಂಚಾರ ಒತ್ತಡವಿರುವ ರಸ್ತೆ ಗಳಲ್ಲಿ ಗಣೇಶ ಪ್ರತಿಷ್ಠಾಪಿಸುವಂತಿಲ್ಲ.
- ಗಣೇಶ ಪ್ರತಿಷ್ಠಾಪನೆ ಗೆ ಬಲವಂತವಾಗಿ ಹಣ ವಸೂಲು ಮಾಡುವಂತಿಲ್ಲ.
- ಗಣೇಶ ಪ್ರತಿಷ್ಟಾಪನೆ ಗೆ ಶಾಮಿಯಾನ ಹಾಕಲು ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯ.
- ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವಂತಿಲ್ಲ, ಜಾಗದ ಮಾಲೀಕರ ಅನುಮತಿ ಪಡೆಯಬೇಕು
- ಫ್ಲೆಕ್ಸ್ ಗಳು, ಬೋರ್ಡ್ಗಳು, ಬ್ಯಾನರ್ಗಳನ್ನು ಅಳವಡಿಸುವಂತಿಲ್ಲ.
- ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಆಯೋಜಕರು ಜವಾಬ್ದಾರರು.
- ಗಣೇಶ ಮೂರ್ತಿ ಇರುವ ಜಾಗದಲ್ಲಿ 24 ಗಂಟೆಗಳ ಕಾಲ ಸಿಸಿಟಿವಿ, ಬೆಳಕು ಇರುವಂತೆ ನಿಗಾವಹಿಸುವುದು.
- ಮೆರವಣಿಗೆ ವೇಳೆ ಯಾವುದೇ ಅವಘಡ ಸಂಭವಿಸಿದ್ರೆ ಆಯೋಜಕರೆ ಹೊಣೆ.
- ಧ್ವನಿವರ್ಧಕಗಳ ಬಳಕೆಗೆ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಗಂಟೆ ವರೆಗೆ ಮಾತ್ರ ಅವಕಾಶ.