ಲೋಕಸಭೆ ಚುನಾವಣೆ ನಂತರ ನಾನು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ಪಕ್ಷದ ಸಭೆಯಲ್ಲಿ ಶಾಸಕ ಮಿತ್ರರು, ಕೋರ್ ಕಮಿಟಿ ಸದಸ್ಯರು ಸೇರಿದಂತೆ ಪಕ್ಷದ ಸಂಘಟನೆಗೆ ಕೆಲವು ನಿರ್ಧಾರ ತೆಗೆದುಕೊಳ್ಳಲು ಎಲ್ಲರೂ ಸಂಪೂರ್ಣ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯಾಧ್ಯಕ್ಷ, ಪದಾಧಿಕಾರಿಗಳನ್ನ ಚುನಾವಣೆ ಮುಖಾಂತರ ಆಯ್ಕೆ ಮಾಡುತ್ತೇವೆ. ಇಂದು ಶಾಸಕರು ಸರ್ವಾನುಮತದಿಂದ ಗುರಿತಿಸಲು ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದ ಸದಸ್ಯರ ನೋಂದಣಿಗೆ ತೀರ್ಮಾನ ಮಾಡಿದ್ದೇವೆ, ರಾಜ್ಯದ ವಿಧಾನಸಭಾ ಸದಸ್ಯರಿಗೆ ಉಸ್ತುವಾರಿ ನೀಡಿ 31 ಜಿಲ್ಲೆಯಲ್ಲಿ ಪಕ್ಷದ ನೋಂದಣಿ ಮಾಡೋಕೆ ತೀರ್ಮಾನ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕರು ಮೈತ್ರಿ ಬಗ್ಗೆ ಲಘುವಾಗಿ ಮಾತನಾಡಿದ್ದರು. ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್- ಬಿಜೆಪಿ ಮೈತ್ರಿ ಬೆಳವಣಿಗೆಯಾಗಿ ನಮ್ಮ ಶಕ್ತಿ ಏನಿದೆ ಎಂಬುದು ಗೊತ್ತಾಗಿದೆ. ಎರಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿರುವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.