ಮೂತ್ರಪಿಂಡ ವೈಫಲ್ಯ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಕಾಂಪ್ಲೆಕ್ಸ್ ಆಂಜಿಯೋಪ್ಲಾಸ್ಟಿ ಹಾಗೂ ಸ್ಟಂಟ್ ಅಳವಡಿಸುವ ಕಾರ್ಯವಿಧಾನವನ್ನು ಸಂಸದ ಹಾಗೂ ಡಾ. ಸಿಎನ್ ಮಂಜುನಾಥ್ ಮತ್ತು ತಂಡ ನೆರವೇರಿಸಿದೆ. ತಮ್ಮ ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿ ರಾಜಕೀಯ ಪ್ರವೇಶ ಮಾಡಿರುವ ಮಂಜುನಾಥ್ ತಮ್ಮ ಕಾಯಕವನ್ನ ಈಗಲೂ ಮುಂದುವರಿಸಿದ್ದು, ಮೂತ್ರಪಿಂಡ ವೈಫಲ್ಯವಾಗಿದ್ದ ವ್ಯಕ್ತಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೀವ ನೀಡಿದ್ದಾರೆ.
ಶೇ 90 ಬ್ಕಾಕೇಜ್ ಆಗಿದ್ದ ವ್ಯಕ್ತಿಗೆ ಸ್ಟಂಟ್ ಅಳವಡಿಕೆ
54 ವರ್ಷ ವಯಸ್ಸಿನ ಮೂತ್ರಪಿಂಡ ವೈಫಲ್ಯವಾಗಿದ್ದ ಹಾಗೂ ಶೇ.90ರಷ್ಟು ಬ್ಕಾಕೇಜ್ ಆಗಿದ್ದ ರೋಗಿಗೆ ಕಾಂಪ್ಲೆಕ್ಸ್ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟ್ ಅಳವಡಿಸುವ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಸ್ವತಃ ಡಾ. ಸಿಎನ್ ಮಂಜುನಾಥ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮುಂದುವರಿದು, ಈ ಪ್ರಕ್ರಿಯೆಯನ್ನ ಹೊಸ ಆರ್ಬಿಟಲ್ ಅಥೆರೆಕ್ಟಮಿ ಸಾಧನವನ್ನು ಬಳಸಿಕೊಂಡಿತು ನೆರವೇರಿಸಲಾಗಿದೆ. ಜಯನಗರದ ಬೆಂಗಳೂರು ಹಾಸ್ಪಿಟಲ್ ರೋಗಿಗಳಿಗೆ ಅತ್ಯುತ್ತಮವಾದ ಆರೈಕೆಯನ್ನು ನೀಡುವುದನ್ನ ಖಚಿತಪಡಿಸುತ್ತದೆ. ಅಗತ್ಯವಿರುವವರಿಗೆ ಸುಧಾರಿತ ಆರೋಗ್ಯ ಸೇವೆಯನ್ನು ಸಿಗುವಂತೆ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಜಕೀಯ ಪ್ರವೇಶಿಸಿ ಸಂಸದರಾದ ನಂತರವೂ ಮಂಜುನಾಥ್ ಅವರು ಮತ್ತೆ ತಮ್ಮ ವೃತ್ತಿಯಲ್ಲಿ ಮುಂದುವರಿದು ಜನರ ಪ್ರಾಣ ಕಾಪಾಡಲು ಸದಾ ಸಿದ್ಧ ಎನ್ನುವ ಅವರ ಗುಣವನ್ನ ನೆಟ್ಟಿಗರು ಪ್ರಶಂಸೆ ಮಾಡುತ್ತಿದ್ದಾರೆ.
ಜಯದೇವಾ ಆಸ್ಪತ್ರೆಯನ್ನ ದೇಶದಲ್ಲೇ ಅಲ್ಲ, ಇಡೀ ದಕ್ಷಿಣ ಏಷ್ಯಾದಲ್ಲಿಯೇ ಖ್ಯಾತಿಗಳಿಸುವಂತೆ ಮಾಡಿದ್ದ ಡಾ.ಸಿಎನ್ ಮಂಜುನಾಥ್ ರಾಜ್ಯದಲ್ಲಿ ಹೃದಯದ ಡಾಕ್ಟರ್ ಅಂತಾನೇ ಫೆಮಸ್ ಆಗಿದ್ದಾರೆ. ಬಡಜನರ ಆಶಾಕಿರಣ ಹಾಗೂ ಬಡ ಹೃದ್ರೋಗಿಗಳ ಜೀವ ಸಲೆಯಾದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸ್ಥಾನಕ್ಕೆ ಇದೇ ವರ್ಷ ಜನವರಿಯಲ್ಲಿ ನಿವೃತ್ತಿ ಹೊಂದಿದ್ದರು.
ಬಡರೋಗಿಗಳ ಪಾಲಿನ ಆಶಾಕಿರಣ, ಹೃದಯದ ಡಾಕ್ಟರ್, ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ದೊರೆಕಿಸಿಕೊಟ್ಟಿದ್ದರು. ವೈದ್ಯರಾಗಿ ತಾವು ಮಾತ್ರ ಎತ್ತರಕ್ಕೆ ಬಳೆಯದೇ ತಮ್ಮೊಂದಿಗೆ ಸಂಸ್ಥೆಯನ್ನು ಕಟ್ಟಿಬೆಳೆಸಿದವರು. ಹೃದ್ರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ ಈ ನಾಡು ಕಂಡ ಶ್ರೇಷ್ಠ ಮಟ್ಟದ ಹೃದ್ರೋಗ ತಜ್ಞ.
ಡಾ.ಸಿ.ಎನ್.ಮಂಜುನಾಥ್ 2006ರಿಂದ 2024ರವರೆಗೆ ಸುದೀರ್ಘ 16 ವರ್ಷ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಅಧಿಕಾರ ನಿರ್ವಹಿಸಿಕೊಂಡಿದ್ದ ಅವರು ಜನವರಿ 31ರಂದು ನಿವೃತ್ತರಾದರು.
ಮಾಜಿ ಮುಖ್ಯಮಂತ್ರಿ ದೇವೇಗೌಡರ ಅಳಿಯನಾಗಿರುವ ಡಾ. ಸಿಎನ್ ಮಂಜುನಾಥ್ ಅವರು ತಾವೂ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ನಿವೃತ್ತಿಯವರೆಗೆ ಸುಮಾರು 6 ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ವೈಯಕ್ತಿಕವಾಗಿ 50 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 24,447 ಆಂಜಿಯೋಗ್ರಾಮ್ಗಳು, 1500 ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಗಳು, 15,000 ಆಂಜಿಯೋಪ್ಲ್ಯಾಸ್ಟಿಗಳು , 3,000 ಬೈಪಾಸ್ ಮತ್ತು ವಾಲ್ವ್ ರಿಪ್ಲೇಸ್ಮೆಂಟ್ ಸರ್ಜರಿಗಳನ್ನು ಮಾಡಿದ್ದಾರೆ.