ಭಾರೀ ಮಳೆಗೆ ಮಹಾನಗರ ಬೆಂಗಳೂರು ತತ್ತರಿಸಿದೆ. ಮೊನ್ನೆಯಷ್ಟೆ ಭಾರೀ ಮಳೆಯಿಂದಾಗಿ ಆಟೋ ಮೇಲೆ ಮರ ಬಿದ್ದು ಚಾಲಕ ಸಾವನ್ನಾಪ್ಪಿದ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಕಾರಿನ ಮೇಲೆ ಮರ ಬಿದ್ದ ಕೂಡಲೆ ಗ್ಲಾಸ್ ಪೀಸ್ ಪೀಸ್ ಆದ ಘಟನೆ ಚಂದ್ರ ಲೇಔಟ್ನಲ್ಲಿ ಸಂಭವಿಸಿತ್ತು.
ಮಳೆಗೆ ಹಲವು ಆಟೋ, ಬೈಕ್, ಕಾರುಗಳ ಮೇಲೆ ಮರ ಬಿರಿದು ಬಿದ್ದು, ಭಾರೀ ಅನಾಹುತಗಳೇ ಸಂಭವಿಸಿವೆ. ಈ ಘಟನೆಯ ಬೆನ್ನಲ್ಲೇ ಇದೀಗ ಸಂಜಯನಗರದಲ್ಲಿ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ. ಮಳೆ ಹಿನ್ನೆಲೆ ಸಂಜಯ್ ನಗರದಲ್ಲಿ ಮರ ಧರೆಗೆ ಉರುಳಿದೆ. ಶಿಷ್ಟ್ ಕಾರು ಹಾಗೂ ಕಾರಿನ ಡ್ರೈವರ್ ಕೂದಲೆಯಾಲ್ಲಿ ಪಾರಗಿದ್ದಾರೆ. ಇನ್ನು ಕಾರ್ ಮನೆಯ ಕಾಂಪೌಂಡ್ ನಿಂದ ಹೊರ ಬರ್ತಿದ್ದಂತೆ ಧರೆಗೆ ಬಿದ್ದಿರೋ ಮರ ನೋಡಿ ಪಕ್ಕದ್ದಲ್ಲಿ ಛತ್ರಿ ಹಿಡಿದು ನಿಂತಿದ್ದ ವ್ಯಕ್ತಿಯೂ ಜೆಸ್ಟ್ ಮಿಸ್ ಎಂಬಂತೆ ಬಚ್ಚಾವ್ ಆಗಿದ್ದಾರೆ. ಸಂಜಯನಗರದ ಅಮರಜ್ಯೋತಿ ಬಡಾವಣೆಯಲ್ಲಿ ಬುಡ ಸಮೇತ ನೆಲ್ಲಕ್ಕೆ ಬಿದ್ದ ಬೃಹತ್ ಮರದ ವಿಡಿಯೋ ಸಿಸಿಟಿವಿ ಅಲ್ಲಿ ಸೆರೆಯಾಗಿದೆ. ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್ ಸಂಪೂರ್ಣವಾಗಿ ಜಖಂ ಆಗಿದೆ.