ಕಳೆದ ಮೂರ್ನಾಲ್ಕು ದಿನಗಳಿಂದ ರಾಜಧಾನಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಮುಂದಿನ ಎರಡು ದಿನಗಳು ಮಳೆಯಾರ್ಭಟ ಮುಂದುವರಿಯುವ ಸಾಧ್ಯತೆ ಇದೆ. ಯಾಕೆಂದರೆ, ಬೆಂಗಳೂರು ಸೇರಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಅಕ್ಟೋಬರ್ 23 ರವರೆಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಗುಡುಗು-ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ದಿವಂಗತ ಅಬ್ದುಲ್ ಕಲಾಂ ಸಂಬಂಧಿಕರಿಗೆ ಬೆಂಗಳೂರು ಜಲ ಕಂಟಕ ತಟ್ಟಿದೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಕೆರೆಯಂತಾಗಿದ್ದು, ಬೋಟಿಂಗ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಪಾರ್ಟ್ಮೆಂಟ್ನ ಡಿ.6 ಬ್ಲಾಕ್ನಲ್ಲಿ ಮಾಜಿ ದಿವಂಗತ ಅಬ್ದುಲ್ ಕಲಾಂ ಸಂಬಂಧಿಕರು ವಾಸಿಸುತ್ತಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಸುಮಾರು 80 ವರ್ಷ ಆಗಿರುವುದರಿಂದ ಅಪಾರ್ಟ್ಮೆಂಟ್ನಿಂದ ಅಂಬುಲೆನ್ಸ್ನಲ್ಲಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಅಪಾರ್ಟ್ಮೆಂಟ್ನಲ್ಲಿ 2500 ಜನರಿದ್ದು, ಮಹಿಳೆಯರಿಗೆ ಲೈಫ್ ಜಾಕೆಟ್ ಹಾಕಿ ಹೊರತರಲಾಗುತ್ತಿದ್ದು, SDRF, NDRF ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಳಗಿನ ಜಾವ 3 ಗಂಟೆಯಿಂದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಪಾರ್ಟ್ಮೆಂಟ್ನ ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಜನರಿಗೆ ಅಲ್ಲಿಂದ ಬೇರೆ ಕಡೆಗೆ ತೆರಳುವಂತೆ ಸೂಚಿಸಿದ್ದು, 250 ಕುಟುಂಬಗಳು ಬೇರೆ ಕಡೆ ತೆರಳಿದ್ದಾರೆ. ಇನ್ನೂ 2000 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ. ಬಿಬಿಎಂಪಿ ಕಮಿಷನರ್ ಆದೇಶದ ಮೇರೆಗೆ ಅಲ್ಲಿಯ ಜನರು ಬೇರೆ ಕಡೆಗೆ ತೆರಳಿದ್ದು, ಬಟ್ಟೆ ಬರೆಯೊಂದಿಗೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡುತ್ತಿದ್ದಾರೆ.