ಬೆಂಗಳೂರು ಪಶ್ಚಿಮ ವಿಭಾಗ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ ನಡೆಸಿ ಹೈ ಬೀಮ್ ಲೈಟ್ ಹಾಕಿ ವಾಹನ ಚಾಲನೆ ಮಾಡಿದವರ ವಿರುದ್ಧ 239 ಪ್ರಕರಣಗಳನ್ನ ದಾಖಲಿಸಿದ್ದಾರೆ. ಹೈ ಬೀಮ್ ಲೈಟ್ ಹಾಕಿ ವಾಹನ ಚಾಲನೆಯಿಂದ ಹೆಚ್ಚು ಅಪಘಾತಗಳಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ವಿಭಾಗ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಳೆದ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಒಟ್ಟು 239 ಪ್ರಕರಣಗಳನ್ನು ಐಎಂವಿ ಕಾಯ್ದೆ 177 ರ ಅಡಿಯಲ್ಲಿ ವಾಹನ ಚಾಲಕರ ವಿರುದ್ಧ ದಾಖಲಿಸಿದ್ದಾರೆ.