ಬೆಂಗಳೂರಿನ ಫುಟ್ಪಾತ್ಗಳಲ್ಲಿ ದಿನಗಟ್ಟಲೇ ವಾಹನ ಪಾರ್ಕ್ ಮಾಡಿ ಹೋಗುವ ಮುನ್ನ ಎಚ್ಚರ. ಫುಟ್ಪಾತ್ನಲ್ಲಿ ದಿನಗಟ್ಟಲೆ ವಾಹನ ಪಾರ್ಕ್ ಮಾಡಿ ಹೋದರೆ ಇನ್ನು ಮುಂದೆ ಭಾರಿ ಬೆಲೆ ತೆರಬೇಕಾಗಿ ಬಂದೀತು.
ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ಸಂಚಾರಿ ಪೋಲಿಸರು ಬಿಸಿ ಮುಟ್ಟಿಸಲಿದ್ದಾರೆ. ಏನ್ ಮಾಡೋದು ಉದ್ಯಾನನಗರಿಯಲ್ಲಿ ಮರಗಳಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು ಕೆಲವರಿಗಂತು ಬೆಂಗಳೂರಿನ ಫುಟ್ಪಾತ್ಗಳಲ್ಲಿ, ರಸ್ತೆ ಬದಿಯಲ್ಲಿ ದಿನಗಟ್ಟಲೇ ವಾಹನ ಪಾರ್ಕ್ ಮಾಡಿ ತೆರಳುವ ಅಭ್ಯಾಸವಿರುತ್ತದೆ. ಇನ್ನ ಮೇಲೆ ಹಾಗೇಲ್ಲ ಮಾಡಿದರೆ ಸಂಚಾರ ಪೊಲೀಸರು ನಿಮ್ಮ ವಾಹನ ಜಪ್ತಿ ಮಾಡೋದು ಪಕ್ಕಾ. ಜಪ್ತಿ ಮಾಡಿದ ನಂತರವೂ ಗಮನಿಸದೆ ವಾಹನ ಬಿಡಿಸಿಕೊಳ್ಳದಿದ್ದರೆ ನಿಮ್ಮ ವಾಹನ ಹರಾಜಾಗಲಿದೆ.
ಈಗಾಗಲೇ ಏನಾಗಿದೆ ಗೋತ್ತಾ..?
- 3 ತಿಂಗಳಲ್ಲಿ 1500 ವಾಹನಗಳು ಜಪ್ತಿ
- ವಾಹನ ನೋಂದಣಿ ಆಧರಿಸಿ ಮಾಲೀಕರಿಗೆ ಮಾಹಿತಿ ನೀಡಲಾಗುತ್ತದೆ
- ನಂಬರ್ ಪ್ಲೇಟ್ ಇಲ್ಲದ 64 ವಾಹನಗಳನ್ನು ಪಾರ್ಕಿಂಗ್ ಯಾರ್ಡ್ಗೆ ಸ್ಥಳಾಂತರ ಮಾಡಲಾಗಿದೆ
- ಮೈಲಸಂದ್ರದ ಪಾರ್ಕಿಂಗ್ ಯಾರ್ಡ್ಗೆ ಸ್ಥಳಾಂತರ ಮಾಡಲಾಗಿದೆ
- ವಾಹನ ಮಾಲೀಕರು ಪತ್ತೆಯಾಗದಿದ್ದರೆ ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ
- 1388 ವಾಹನಗಳನ್ನು ಮಾಲೀಕರು ದಂಡ ಪಾವತಿಸಿ ಬಿಡಿಸಿಕೊಂಡಿದ್ದಾರೆ
- ಇದರ ಜೊತೆಗೆ ವಾಹನದ ಮೇಲೆ ಇರುವ ಹಳೆ ದಂಡವನ್ನೂ ವಸೂಲಿ ಮಾಡಲಾಗುತ್ತಿದೆ
ಜಪ್ತಿಗೆ ಏನು ಕಾರಣ..?
- ಪಾದಚಾರಿಗಳ ಓಡಾಟಕ್ಕೆ ತೊಂದರೆ
- ಅಂತಹ ವಾಹನಗಳನ್ನು ಕಳವು ಮಾಡಿ ಅಪರಾಧ ಕೃತ್ಯಗಳಿಗೆ ಬಳಸುವ ಅತಂಕ ಎದುರಾಗಿದೆ
- ಸುದೀರ್ಘ ಕಾಲದಿಂದ ಪಾರ್ಕ್ ಮಾಡಿರುವ ವಾಹನಗಳು ಕಳ್ಳತನ ಹೆಚ್ಚಿದೆ
ಬೆಂಗಳೂರು ನಗರದ ಫುಟ್ಪಾತ್ಗಳು, ಸಾರ್ವಜನಿಕ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಗುರುತಿಸಲು, ತಂಡಗಳನ್ನು ರಚಿಸಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಳೆದ ಫೆಬ್ರವರಿ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಬಹಿರಂಗಪಡಿಸಿದ್ದರು.
ಯಾವುದೇ ವಾಹನವನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್ಪಾತ್ಗಳು ಅಥವಾ ರಸ್ತೆಗಳಲ್ಲಿ ನಿಲ್ಲಿಸಿದರೆ ಅದನ್ನು ವಾರಸುದಾರರು ತ್ಯಜಿಸಿದ ವಾಹನ ಎಂದು ಪರಿಗಣಿಸಲಾಗುತ್ತದೆ. ನೋಂದಾಯಿತ ಮಾಲೀಕರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಅಫಿಡವಿಟ್ನಲ್ಲಿ ಹೇಳಲಾಗಿತ್ತು. ವಾರಸುದಾರರಿಲ್ಲದ ವಾಹನಗಳಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ಮಾಹಿತಿ ನೀಡುವ ಸಂದರ್ಭದಲ್ಲಿ ಇದನ್ನು ಉಲ್ಲೇಖಿಸಿದ್ದರು.