ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಈ ವೇಳೆ ಮಳೆ ಬಂದರೆ ಪಂದ್ಯ ರದ್ದಾಗುವ ಸಾಧ್ಯತೆ ಇರುವಾಗಲೇ ಡೈ ಹಾರ್ಡ್ ಆರ್ ಸಿ ಬಿ ಪ್ಯಾನ್ಸ್ ಮಳೆ ಬಂದರು ಚಿಂತೆ ಇಲ್ಲ . ಇಡೀ ಚಿನ್ನಸ್ವಾಮಿ ಸ್ಟೇಡಿಯಂಗೆ ಕೊಡೆ ಅಳವಡಿಸಿಯಾದ್ರು ಪಂದ್ಯ ನಡೆಸುತ್ತೆವೇ ಅನ್ನುವಷ್ಟು ಇವತ್ತಿನ ಪಂದ್ಯಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ.
ಎಸ್ ಇಂದಿನ ಪಂದ್ಯ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಇವತ್ತಿನ ಪಂದ್ಯವನ್ನು ಗೆದ್ದು ಬೀಗಲು ಆರ್ಸಿಬಿ ಎಲ್ಲ ಪ್ರಯತ್ನಗಳನ್ನು ಮಾಡ್ತಿದೆ. ಈ ಮಧ್ಯೆ ಮಳೆರಾಯನ ಆತಂಕ ಶುರುವಾಗಿದೆ.
ಹೌದು, ಮಳೆ ಬಂದ್ರೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅವಕಾಶ ಇದೆ. ಆರ್ಸಿಬಿಗೆ ಸಬ್ ಏರ್ ಸಿಸ್ಟಮ್ ವರದಾನವಾಗುತ್ತಾ ಎಂದು ಕಾದು ನೋಡಬೇಕು ಅಷ್ಟೇ. ಮಳೆ ನಿಂತರೆ 15ರಿಂದ 30 ನಿಮಿಷಗಳಲ್ಲಿ ಆರಂಭವಾಗಲಿದೆ. ದೇಶದಲ್ಲೇ ಸಬ್ ಏರ್ ಸಿಸ್ಟಮ್ ಹೊಂದಿರುವ ಏಕೈಕ ಕ್ರೀಡಾಂಗಣ ಅಂದರೆ ಅದು ಬೆಂಗಳೂರಿನ ಸ್ಟೇಡಿಯಂ.