- ‘ಹತ್ತಿ ಕ್ಯಾಂಡಿ’ಗಳಲ್ಲಿ ಕೃತಕ ಬಣ್ಣಗಳ ಬಳಕೆ ನಿಷೇಧಿಸಿದ್ದ ರಾಜ್ಯ ಸರ್ಕಾರ
- ಚಿಕನ್, ಫಿಶ್ ಹಾಗೂ ವೆಜ್ ಕಬಾಬ್ಗೆ ಕಲರ್ ಬಳಕೆ ಮಾಡುವಂತಿಲ್ಲ
ರಾಜ್ಯದಲ್ಲಿ ಗೋಬಿ ಮಂಚೂರಿಯನ್’ ಮತ್ತು ‘ಹತ್ತಿ ಕ್ಯಾಂಡಿ’ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಏಕೆಂದರೆ ಅವುಗಳ ಬಳಕೆಯು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂದು ನಿಷೇಧಿಸಲಾಗಿತ್ತು. ಗೋಬಿ ಮಂಚೂರಿ ಬಳಿಕ ಈಗ ರಾಜ್ಯದಲ್ಲಿ ಕಬಾಬ್ ಸರದಿ ಶುರುವಾಗಿದೆ. ಚಿಕನ್, ಫಿಶ್ ಹಾಗೂ ವೆಜ್ ಕಬಾಬ್ಗೆ ಇನ್ಮುಂದೆ ಕಲರ್ ಬಳಕೆ ಮಾಡುವಂತಿಲ್ಲ. ಕಲರ್ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ.
ಕಬಾಬ್ ತಯಾರಿಕೆಯಲ್ಲಿ ಬಳಸುವ ಕಲರ್ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಬಾಬ್ಗೆ ಕಲರ್ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ರಾಜ್ಯದ 36 ಕಡೆಗಳಲ್ಲಿ ಕಬಾಬ್ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ನೀಡಲಾಗಿತ್ತು. ಇದ್ರಲ್ಲಿ ಯೆಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಲರ್ ಬ್ಯಾನ್ ಮಾಡಿದೆ.