ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕರಗ ಮಹೋತ್ಸವ ಮಂಗಳವಾರ ನಡೆಯಲಿದೆ. ಹೀಗಾಗಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಕರಗ ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಕರಗ ಮಹೋತ್ಸವ ನಡೆಯಲಿದೆ. ಅದ್ಧೂರಿಯಾಗಿ ಕರಗವನ್ನು ಬರಮಾಡಿಕೊಳ್ಳಲು ಕರಗ ಸಮಿತಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ನಾಳೆ ಬೆಳಗ್ಗೆಯಿಂದ ಕರಗದ ಶಾಸ್ತ್ರಗಳು ಆರಂಭವಾಗಿ ಮಧ್ಯರಾತ್ರಿವರೆಗೂ ನಡೆಯಲಿದೆ. ಶಾಸ್ತ್ರಗಳು ಮುಗಿದ ನಂತರ ಮಧ್ಯರಾತ್ರಿ 2 ಗಂಟೆಗೆ ಅಧಿಕೃತವಾಗಿ ಕರಗ ಆರಂಭವಾಗಲಿದೆ.
ಸದ್ಯ ಹಸಿ ಕರಗ ನಡೆದ ನಂತರ ತಾಯಿ ದ್ರೌಪದಿ ತಾಯಿ ನೆಲೆಸಿದ್ದಾಳೆ ಎಂದೇ ಪರಿಗಣನೆ ಮಾಡಲಾಗುತ್ತದೆ. ಹೀಗಾಗಿ ನಾಳೆ ತಾಯಿಗೆ ವಿಶೇಷ ಶಾಸ್ತ್ರಗಳನ್ನು ಮಾಡಲಾಗುತ್ತೆ. ಅದರಲ್ಲಿ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರಗಳು ನೆರವೇರಲಿದೆ. ಹಿಂದಿನ ಸಂಪ್ರದಾಯದಂತೆ ಎಲ್ಲ ಪೇಟೆಗಳಲ್ಲಿಯೂ ಕರಗ ಮೆರವಣಿಗೆ ಈ ಬಾರಿಯೂ ಇರಲಿದೆ.
ಕರಗ ಮೆರವಣಿಗೆ ಮೊದಲು ಮುಸ್ತಾನ್ ಸಾಬ್ ದರ್ಗಾ ಭೇಟಿ ಮಾಡಿ, ಅಣ್ಣಮ್ಮ ದೇವಾಲಯದ ಮೂಲಕ ತಿಗಳರಪೇಟೆಯಿಂದ ವಾಪಾಸ್ ಧರ್ಮರಾಯ ದೇಗುಲಕ್ಕೆ ಬರಲಿದೆ. ಕರಗ ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಿಯೂ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.