ದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ವೆಸ್ಟ್ ಬೆಂಗಾಲ್, ಒಡಿಶಾ ಇನ್ನು ಅನೇಕ ಕಡೆ ಗಾಳಿ, ಮಳೆಯಿಂದ ದೊಡ್ಡ ಅನಾಹುತಗಳೇ ಆಗಿದೆ. ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದೆ. ಇನ್ನು ಕೆಲವು ಕಡೆ ಮನೆ, ಗುಡ್ಡಗಳು ಕುಸಿದು ದೊಡ್ಡ ಮಟ್ಟದ ಆಸ್ತಿ, ಪ್ರಾಣ ಹಾನಿಗಳು ಆಗಿದೆ. ಇದರ ನಡುವೆ ಬೆಂಗಳೂರಿನಲ್ಲಿ ನೀರಿನ ಜತೆಗೆ ಮೀನುಗಳು ಕೂಡ ರಸ್ತೆಗೆ ಬಂದಿದೆ. ಜನರು ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ.
ಮಳೆ ನೀರಿನ ಜೊತೆಗೆ ಬೆಂಗಳೂರಿಗರಿಗೆ ಮೀನುಗಳು ಕೂಡ ರಸ್ತೆಯಲ್ಲಿ ಸಿಗುತ್ತಿವೆ. RR ನಗರದ ಗಟ್ಟಿಗೆರೆ ಮೈನ್ ರೋಡಲ್ಲಿ ಮೀನು ಪ್ರತ್ಯಕ್ಷವಾಗಿದೆ. ನೀರಿನ ಜತೆಗೆ ಮೀನುಗಳು ಕೂಡ ರಸ್ತೆಗೆ ಬಂದಿದ್ದು, ಇದೀಗ ಜನರು ರಸ್ತೆಗೆ ಬಂದಿರುವ ಮೀನುಗಳನ್ನು ಹಿಡಿಯುತ್ತಿದ್ದಾರೆ. ಮೀನುಗಳನ್ನ ಕಂಡು ಜನರು ಅಚ್ಚರಿಪಟ್ಟಿದ್ದು, ಹಾಗೇಯೆ ಖುಷಿನುಪಟ್ಟಿದ್ದಾರೆ. ಇನ್ನು ಓಕಳಿಪುರಂ ಅಂಡರ್ಪಾಸ್ನಲ್ಲಿ ಭಯಾನಕ ರೀತಿಯಲ್ಲಿ ನೀರು ನಿಂತಿದೆ. ಕೆರೆಯಂತಾದ ರಸ್ತೆಯಲ್ಲಿ ಸವಾರರ ಪರದಾಟ ನಡೆಸ್ತಿದ್ದಾರೆ. ಮಳೆಯಿಂದಾಗಿ ಅರ್ಧ ದಾರಿಯಲ್ಲೇ ಆಟೋ, ಕಾರುಗಳು ಕೆಟ್ಟು ನಿಂತಿವೆ.