ವಿದೇಶದಿಂದ ಅಕ್ರಮವಾಗಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ ಸ್ಮಗ್ಲರ್ನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೀನ್ಯಾ ಮೂಲದ ಒದಿಹಾಂಬೋ ಮಾರ್ಗನ್ ಬೈರನ್ ಎನ್ನುವ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ಲಗೇಜ್ ಬ್ಯಾಗ್ ಪರಿಶೀಲನೆ ವೇಳೆ ಅಕ್ರಮವಾಗಿ ತಂದಿದ್ದ ಮೂರು ಕೆ.ಜಿ. ಕೊಕೇನ್ ಪತ್ತೆಯಾಗಿದೆ. ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಇದಾಗಿದೆ.
ಈ ಸ್ಮಗ್ಲರ್ ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6ಇ1302 ವಿಮಾನದಲ್ಲಿ ಬಂದಿದ್ದ. ಲಗೇಜ್ ಬ್ಯಾಗ್ ಚೆಕಿಂಗ್ ವೇಳೆ ಡಿ.ಆರ್.ಐ ತಂಡದ ಕಾರ್ಯಚರಣೆಯ ವೇಳೆ ಈ ಬಾರೀ ಮೌಲ್ಯದ ಕೊಕೇನ್ ಪತ್ತೆಯಾಗಿದೆ. ಕೊಕೇನ್ ಸಮೇತ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.