ಬೆಂಗಳೂರು: ಬಸ್ ಪ್ರಯಾಣದ ವೇಳೆ ಚಿಲ್ಲರೆ ವಿಚಾರಕ್ಕೆ ಜಗಳವಾಗದ ದಿನ ಇಲ್ಲ. ಇನ್ಮುಂದೆ ಆ ರೀತಿಯ ಪ್ರಮೇಯ ಬರಲ್ಲ. ಕೆಎಸ್ಆರ್ಟಿಸಿ ಮತ್ತಷ್ಟು ಜನಸ್ನೇಹಿ ಆಗುತ್ತಿದ್ದು, ತನ್ನ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಲು ಮುಂದಾಗಿದೆ.
ಇದನ್ನು ಓದಿ: ಬಿಗ್ಬಾಸ್ನಲ್ಲಿ ಸ್ಪರ್ಧಿಗಳ ನಡುವೆ ಅವಾರ್ಡ್ಗಳಿಂದ ಬೇಸರ!
ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಡಿಜಿಟಲ್ ಪಾವತಿ’ಗೆ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿ ಮಾಡಬಹುದು. ಇಷ್ಟು ದಿನ ಕೆಎಸ್ಆರ್ಟಿಸಿಯಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇರಲಿಲ್ಲ. ಇದರಿಂದ ಚಿಲ್ಲರೆ ಸಮಸ್ಯೆ ಪ್ರಯಾಣಿಕರನ್ನು ಕಾಡ್ತಿತ್ತು.
ಇದನ್ನು ಓದಿ:ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಭಾರತ್ ಅಕ್ಕಿ ವಿತರಣೆ!
ಸಂಸ್ಥೆಯ ಹೊಸ ನಿಯಮದ ಪ್ರಕಾರ, ಆನ್ಲೈನ್ ಮೂಲಕವೂ ಹಣ ಪಾವತಿಸಲು ಅವಕಾಶ ಹಿನ್ನೆಲೆಯಲ್ಲಿ ಪ್ರಯಾಣದ ವೇಳೆ ಆಗುವ ಕಿರಿಕಿರಿ ತಪ್ಪಲಿದೆ. ಕೆಲವು ನಿರ್ವಾಹಕರು ಹಣ ಪಡೆದು ಟಿಕೆಟ್ ನೀಡದೇ ಇರುವ ಪ್ರಕರಣಗಳು ಸಹ ತಪ್ಪಲಿದೆ. ಚಿಲ್ಲರೆ ಇದ್ದೂ ಹಣ ನುಂಗಲು ಕುತಂತ್ರ ಮಾಡುತ್ತಿದ್ದ ಕಂಡಕ್ಟರ್ಗಳ ಹಪಾಹಪಿ ತನಕ್ಕೂ ಬ್ರೇಕ್ ಬೀಳಿಲಿದೆ.