ಶಿಕ್ಷಣ ಇಲಾಖೆಯ ಕೆಲ ನಿರ್ಧಾರಗಳಿಂದ ಬೇಸತ್ತಿದ್ದ ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟ ಈ ಬಾರಿ ಕರಾಳ ಸ್ವಾತಂತ್ರ್ಯ ಆಚರಣೆ ಹಾಗೂ ಶಾಲೆ ಬಂದ್ ಮಾಡಲು ತೀರ್ಮಾನಿಸಿತ್ತು. ಖಾಸಗಿಶಾಲೆಗಳು ಪ್ರತಿಭಟನೆಗೆ ಕರೆ ಕೊಟ್ಟ ಹಿನ್ನೆಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಖಾಸಗಿ ಶಾಲೆಗಳ ಒಕ್ಕೂಟದೊಂದಿಗೆ ಸಭೆ ನಡೆಸಿದ್ದಾರೆ.
ಖಾಸಗಿ ಶಾಲೆ ಒಕ್ಕೂಟವಾದ ಕ್ಯಾಮ್ಸ್ ಈ ಬಾರಿ ಸ್ವಾತಂತ್ರ್ಯೊತ್ಸವದಂದು ಕರಾಳದಿನವನ್ನಾಗಿ ಆಚರಿಸಲು ಮುಂದಾದ್ರೆ ಮತ್ತೊಂದು ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಶಾಲೆಗಳನ್ನ ಬಂದ್ ಮಾಡಿ ಬೀದಿಗಿಳಿದು ಪ್ರತಿಭಟನೆ ಮಾಡಲು ತಿರ್ಮಾನಿಸಿತ್ತು. ಪ್ರತಿಭಟನೆಗೆ ಖಾಸಗಿ ಶಾಲೆಗಳು ಕರೆ ಕೊಟ್ಟ ಹಿನ್ನೆಲೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಇಂದು ಕ್ಯಾಮ್ಸ್ ಹಾಗೂ ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ದೊಂದಿಗೆ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಸಭೆ ನಡೆಸಿ ಚರ್ಚಿಸಿದರು.
ಸಚಿವ ಮಧುಬಂಗಾರಪ್ಪ ಪ್ರತ್ಯೇಕವಾಗಿ ಎರಡೂ ಖಾಸಗಿ ಶಾಲೆಗಳ ಒಕ್ಕೂಟದೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಲೈಸೆನ್ಸ್ ರಿನಿವಲ್ಗೆ ಇರುವ ತೊಡಕುಗಳು,ಟ್ಯೂಷನ್ ಮಾಫೀಯಾ, ಟ್ಯಾಕ್ಸ್ ವಿಚಾರ ಹೀಗೆ ಹತ್ತು ಹಲವು ವಿಚಾರಗಳನ್ನ ಖಾಸಗಿ ಶಾಲೆ ಒಕ್ಕೂಟ ಪ್ತಸ್ತಾಪಿಸಿದ್ದು, ಕೂಡಲೇ ತಮ್ಮ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿತು.
ಸಚಿವ ಮಧು ಬಂಗಾರಪ್ಪ ಖಾಸಗಿ ಶಾಲೆಗಳ ಬೇಡಿಕೆಗೆ ಸಂಭಂದಿಸಿದಂತೆ ಅಧಿಕಾರಿಗಳ ಬಳಿ ಸ್ಪಷ್ಟನೆ ತೆಗೆದುಕೊಂಡು ಸಾದಕ ಬಾದಕಗಳನ್ನ ಖಾಸಗಿ ಶಾಲೆಗಳ ಒಕ್ಕೂಟದ ಸಮ್ಮುಖದಲ್ಲೇ ಚರ್ಚಿಸಿ ಸಕಾರಾತ್ಮಕವಾಗಿ ಸ್ಫಂದಿಸಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಎರಡೂ ಸಂಘಟನೆಗೆ ಮನವಿ ಮಾಡಿದ್ರು. ಸಚಿವರ ಮನವಿಗೆ ಸ್ಪಂದಿಸಿದ ರೂಪ್ಸಾ ಹಾಗೂ ಕಾಮ್ಸ್ ತಮ್ಮ ಪ್ರತಿಭಟನೆಯ ನಿರ್ಧಾರದಿಂದ ಹಿಂದೆ ಸರಿದಿದೆ.ಸಭೆ ಬಳಿಕ ರೂಪ್ಸಾ ಅಧ್ಯಕ್ಷ ಲೇಪಾಕ್ಷಿ ಮಾತನಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಸಕಾರಾತ್ಮಕ ವಾಗಿ ಸ್ಪಂದಿಸಿದ್ದು ತಮ್ಮ ಪ್ರತಿಭಟನೆಯ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ್ದು,ಆದಷ್ಟು ಬೇಗ ಸಚಿವರು ಕೊಟ್ಟ ಬೇಡಿಕೆ ಇಡೇರಿಸಬೇಕೆಂದು ಆಗ್ರಹಿಸಿದ್ರೂ ಇನ್ನೂ ಕ್ಯಾಮ್ಸ್ ಸಂಘಟನೆ ಅಧ್ಯಕ್ಷ ಶಶಿಕುಮಾರ್ ಮಾತನಾಡಿ ಕರಾಳ ಸ್ವಾತಂತ್ರ್ಯ ಆಚರಿಸೋ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ್ರೂ