ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 31 ರಂದು ಮಧ್ಯಾಹ್ನ 12.30 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ. ಮೀರತ್-ಲಖನೌ, ಮಧುರೈ-ಬೆಂಗಳೂರು, ಚೆನ್ನೈ-ನಾಗರಕೋಯಿಲ್ ನಡುವೆ ಈ ರೈಲುಗಳ ಸಂಚಾರ ಮಾಡಲಿವೆ. ಮಧುರೈ- ಬೆಂಗಳೂರು ವಂದೇ ಭಾರತ್ ರೈಲು ಸುಮಾರು 1 ಗಂಟೆ 30 ನಿಮಿಷಗಳ ಪ್ರಯಾಣದ ಸಮಯ ಉಳಿತಾಯ ಮಾಡುತ್ತದೆ.