ತಾಯಿಯೇ ದೇವರು ಎಂಬ ಮಾತಿದೆ. ಆದರಿಲ್ಲಿಒಬ್ಬ ಮಹಿಳೆ ತನ್ನ ಮಕ್ಕಳನ್ನೇ ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಒಳಗಾದ ಮಹಿಳೆ 35 ವರ್ಷದ ಕುಸುಮಾ ಎಂದು ತಿಳಿದು ಬಂದಿದ್ದು, ಹತ್ಯೆಗೊಳಗಾದ ಆಕೆಯ ಮಕ್ಕಳು ಶ್ರೀಯನ್ (6 ವರ್ಷ) ಮತ್ತು ಚಾರ್ವಿ (2 ವರ್ಷ) ಎಂದು ತಿಳಿದು ಬಂದಿದೆ.
ಸಾಯುವ ಮುಂಚೆ ಡೆತ್ ನೋಟ್ ಬರೆದಿದ್ದು, ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದೆ. ಬೆಂಗಳೂರಿನ ಕೊಡಿಗೆಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸುರೇಶ್ -ಕುಸುಮಾ ದಂಪತಿ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಆಕೆಯೂ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.