ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಮುಡಾ ಹಗರಣ ಮುಚ್ಚಿ ಹಾಕಲು ಬಿಡಲ್ಲ ಎಂದು ಗುಡುಗಿದರು. ರಾಜ್ಯದ ಜನರ ಗಮನವೆಲ್ಲ ಮುಡಾ ಹಗರಣದತ್ತ ಹರಿಯುವಂತೆ ಮಾಡಿರುವ ಪ್ರಯತ್ನ ಯಶ ಕಂಡಿದೆ ಎಂದರು. ನಿನ್ನೆ ಚಾಮರಾಜನಗರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಡಾ ಸೈಟು ಹಂಚಿಕೆ ಸಂಬಂಂಧಿಸಿದಂತೆ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿ ನನ್ನ ಹೆಸರನ್ನು ಉಲ್ಲೇಖಿಸುತ್ತಾ ಸಿಎಂ ಕುರ್ಚಿಗಾಗಿ ಟವೆಲ್ ಹಾಕಿರುವವರು ಮುಡಾ ಹಗರಣ ಬೆಳಕಿಗೆ ತಂದಿದ್ದಾರೆ ಅಂತ ಹೇಳಿರುವುದೆಲ್ಲ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದರು.
ಮುಡಾದಿಂದಲೇ ತಪ್ಪು ನಡೆದಿರೋದು, ಹಾಗಾಗಿ ತನಗೆ ಆ 14 ಸೈಟುಗಳು ಬೇಡ, ಅದರ ಬದಲಿಗೆ ₹ 62 ಕೋಟಿ ಕೊಡಲಿ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಗೇಲಿ ಮಾಡಿದರು. ಬೀದಿ ಬೀದಿಗಳಲ್ಲಿ ಮೂಡಾ ದಾಖಲೆಗಳು ರವಾನ ಆಗ್ತಾ ಇದೆ. ಚುನಾವಣೆ ಸಂದರ್ಭದಲ್ಲಿ ಪೆನ್ ಡ್ರೈವ್ ರೀತಿ ಆಗಿದೆ. ನಮ್ಮ ಜಮೀನು ನಮ್ಮ ಜಮೀನು ಅಂತಿರಾ ಅಲ್ಲಿ ಎಲ್ಲಿದೆ ಅಷ್ಟು ಬೆಲೆ. ಆ ಜಮೀನು ಮಾಲೀಕರು ಯಾರು? ಯಾರ ಹೆಸರಿನಲ್ಲಿ ಆ ಜಮೀನು ಇದೆ? ಮುಡಾದವರು ವಶಕ್ಕೆ ತೆಗೆದುಕೊಂಡು ಬಳಿ ಏನಾಗಿದೆ? ಇವರ ಧರ್ಮಪತ್ನಿ ಹೆಸರಿಗೆ ಯಾವಾಗ ಬಂತು? 2013ರ ಚುನಾವಣೆ ಗೆ ನಿಂತಾಗ ಈ ಜಮೀನು ಘೋಷಣೆ ಮಾಡಿಕೊಂಡಿದ್ದಾರಾ? ಎಂಬ ಹಲವು ಪ್ರಶ್ನೆಗಳ ಸುರಿಮಾಲೆಯನ್ನೆ ಬಿಚ್ಚಿಟ್ಟಿದ್ದಾರೆ?
ಹಗರಣವೇ ನಡೆದಿಲ್ಲ ಅಂತಾದ್ರೆ ತನಿಖೆ ಯಾವ ಕಾರಣಕ್ಕಾಗಿ ನಡೆಸಲಾಗುತ್ತಿದೆ? ಧಾವಂತದಿಂದ ಹೆಲಿಕಾಪ್ಟರ್ನಲ್ಲಿ ಬಂದು ಯಾವ್ಯಾವ ದಾಖಲಾತಿಗಳನ್ನು ಅವರು ತುಂಬಿಕೊಂಡು ಹೋಗಿದ್ದಾರೆ? ಹಿಂದೆ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದರು ಅಂತ ಯಾರಿಗೂ ಗೊತ್ತಾಗಲಿಲ್ಲ ಎಂದು ಹೇಳಿದ ಕುಮಾರಸ್ವಾಮಿ ಈ ಹಗರಣವನ್ನು ಎಲ್ಲಿಗೆ ಮುಟ್ಟಿಸಲಿದ್ದಾರೆ ಅನ್ನೋದು ಸಹ ಗೊತ್ತಾಗುತ್ತಿಲ್ಲ ಎಂದರು.