ತನ್ನನ್ನು ಬಿಟ್ಟು ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಫಾಜಿಲ್ಲಾ (34) ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದು ಪತ್ನಿಯನ್ನು ಗಂಡ ತಬ್ರೇಜ್ ಪಾಷಾ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಹಲವು ದಿನಗಳಿಂದ ಜಗಳ ಆಗುತ್ತಿತ್ತು ಎನ್ನಲಾಗಿದ್ದು, ಅದೇ ರೀತಿ ಇಂದು ಬೆಳಗ್ಗೆ ಕೂಡ ಇಬ್ಬರ ಮಧ್ಯೆ ಜಗಳ ಆಗಿದೆ ಎನ್ನಲಾಗಿದೆಯಂತೆ. ಬೆಳಗ್ಗೆ 8:30ಕ್ಕೆ ಘಟನ ನಡೆದಿದ್ದು, ಕೊಲೆ ಮಾಡಿ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿರುವ ದೃಶ್ಯಗಲು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಒಂಬತ್ತು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಎರಡು ಮಕ್ಕಳಿದ್ದು, ಇತ್ತೀಚೆಗೆ ಗಾಂಜಾ, ಕಳ್ಳತನದ ಕೇಸ್ ನಲ್ಲಿ ಆರೋಪಿ ಭಾಗಿಯಾಗಿದ್ದನಂತೆ. ಅಲ್ಲದೇ ಮನೆಯಲ್ಲಿ ಪತ್ನಿ ಜೊತೆ ಹೆಚ್ಚು ಜಗಳ ಮಾಡುತ್ತಿದ್ದನ್ನು ನೋಡಿ ವಿಚ್ಛೇದನ ನೀಡಲು ಸಂಬಂಧಿಕರು ಪ್ರಯತ್ನ ಮಾಡಿದ್ದಾರಂತೆ.
ಕೊಲೆ ಮಾಡುವ ಉದ್ದೇಶದಿಂದಲೇ ಆರೋಪಿ ತಬ್ರೇಜ್ ಮನೆಗೆ ಚಾಕುವಿನೊಂದಿಗೆ ಎಂಟ್ರಿ ಕೊಟ್ಟಿದ್ದನಂತೆ. ಅಲ್ಲದೇ ಬೈಕ್ ಅನ್ನು ಮನೆಯಿಂದ ಸ್ವಲ್ಪ ದೂರ ನಿಲ್ಲಿಸಿ ಬಂದಿದ್ದ, ಕೊಲೆ ಮಾಡಿದ ಕೂಡಲೇ ಏನು ಆಗಿಲ್ಲ ಎಂಬಂತೆ ಮನೆಯಿಂದ ಹೊರ ನಡೆದಿರುವುದು ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.