ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ 2ನೇ ಹಂತದ ನೀಲಿ ಮಾರ್ಗಕ್ಕೆ ರೈಲು ವಿದ್ಯುದೀಕರಣ ತಂತ್ರಜ್ಞಾನ ಒದಗಿಸುವ ಆದೇಶವನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು ಮುಂಬೈ ಮೂಲದ ಸೀಮೆನ್ಸ್ ಲಿಮಿಟೆಡ್ ಒಕ್ಕೂಟಕ್ಕೆ ನೀಡಿದೆ. ಕಾಮಗಾರಿ ಒಟ್ಟು 766 ಕೋಟಿ ಅಂದಾಜು ವೆಚ್ಚದಲ್ಲಿ ನಡೆಯಲಿದೆ. ಸೀಮೆನ್ ಲಿಮಿಟೆಡ್ ಅಂದಾಜು 558 ಕೋಟಿಯ ಕಾಮಗಾರಿ ನಿರ್ವಹಿಸಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ – ಕೆ.ಆರ್.ಪುರ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಕಾರಿಡಾರ್ 58 ಕಿ.ಮೀ. ಉದ್ದದ ಮಾರ್ಗ ಇದಾಗಿದೆ. ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯಲ್ಲಿ 30 ನಿಲ್ದಾಣಗಳಿವೆ.