- ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಜನರು ಪರದಾಟ
- ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್ಗೆ ಸ್ಥಳಾಂತರಿಸಲಾಯಿತು
ಟ್ರಿನಿಟಿ ಮೆಟ್ರೋ ಯಾವಾಗಲು ಒಂದಾದ ಮೇಲೆ ಒಂದು ತಾಂತ್ರಿಕ ಸಮಸ್ಯೆಗೆ ಕಾರಣವಾಗುತ್ತಲೇ ಇರುತ್ತದೆ. ಮೆಟ್ರೋ ಹಳಿಯಲ್ಲಿ ಬಿರುಕು ಕಂಡಿದ್ದು, ಮಳೆ ಹೆಚ್ಚಾದ ಕಾರಣ ಹಳಿ ಮೇಲೆ ಮರ ಬಿದಿದ್ದು ಹೀಗೆ ಆನೇಕ ಸಮಸ್ಯೆಗಳು ನೋಡಿದ್ದೀವಿ.
ಬೆಂಗಳೂರಿನ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಜನ ಸಾಮಾನ್ಯರು ಮೆಟ್ರೋ ಮೊರೆ ಹೋಗ್ತಾರೆ ಆದ್ರೆ ಇಂದು ಬೆಳ್ಳಿಗೆ ಮೆಟ್ರೋದಲ್ಲಿ ಕೆಲಸಕ್ಕೆ ಹೊರಟವರು ಪರದಾಡುವಂತಾಗಿದೆ. ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ಟ್ರಿನಿಟಿ ಬಳಿ ತಾಂತ್ರಿಕ ಸಮಸ್ಯೆ ಉಂಟಾಗಿ ಜನರು ಹೊರಗಡೆ ಹೋಗದೆ ಪರದಾಡುವಂತಾಗಿದೆ. ಇತ್ತೀಚಿಗೆ ನಮ್ಮ ಬೆಂಗಳೂರು ಮೆಟ್ರೋ ಆಗಾಗ ಕೈ ಕೊಡುತ್ತಿದೆ. ಒಂದಾದ ಮೇಲೆ ಒಂದು ಸಮಸ್ಯೆಗಳನ್ನ ಎದುರಿಸುತ್ತಿದೆ.
ಇಂದು ಬೆಳಗ್ಗೆ ಸುಮಾರು 9.58 ಗಂಟೆಗೆ ಮೆಟ್ರೋ ಹತ್ತಿದ್ದ ಪ್ರಯಾಣಿಕರು ಇನ್ನೇನು ಇಳಿಯಬೇಕು ಎಂದು ಡೋರ್ ನ ಬಳಿ ಕಾದು ನಿಂತ್ತಿದ್ದ ಪ್ರಯಾಣಿಕರಿಗೆ ಡೋರ್ ಓಪನ್ ಆಗದೆ ಬೋಗಿ ಒಳಗಡೆ ಲಾಕ್ ಆದರು. ಬಳಿಕ ನಿಂತ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್ಗೆ ಸ್ಥಳಾಂತರಿಸಲಾಯಿತು. ಮೆಜೆಸ್ಟಿಕ್ನ ಟ್ರ್ಯಾಕ್ಗೆ ಶಿಫ್ಟ್ ಮಾಡಿ ಮೆಟ್ರೋ ಇಂಜಿನಿಯರ್ಗಳನ್ನ ಕರೆಸಿ ಲಾಕ್ ಆಗಿದ್ದ ಡೋರ್ ಓಪನ್ ಮಾಡಿಸಲಾಯ್ತು.
ರೈಲು ಸೇವೆಗಳನ್ನು ಮರುಸ್ಥಾಪಿಸಲಾಗಿದೆ ಮತ್ತು ಸಾಮಾನ್ಯ ಸ್ಥಿತಿಗೆ ಮರುಸ್ಥಾಪಿಸಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಬಹುದು ಎಂದು BMRCL ನಮ್ಮ ಮೆಟ್ರೋ ಖಾತೆಯಿಂದ ಟ್ವೀಟ್ ಮಾಡಿ ಇದರ ಬಗ್ಗೆ ವಿಷಾದಿಸುತ್ತೇವೆ ಎಂದಿದ್ದಾರೆ.