ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ಹೊಸ ಸೌಲಭ್ಯವನ್ನು ಒದಗಿಸಲು ಸಜ್ಜಾಗಿದೆ. ಪ್ರಯಾಣಿಕರ ವಸ್ತುಗಳನ್ನು ಕಾಯ್ದಿರಿಸಲು ತಾತ್ಕಾಲಿಕ ಲಾಕರ್ ಬಾಡಿಗೆ ವ್ಯವಸ್ಥೆ ಆರಂಭಿಸಲಾಗಿದೆ. ಸೇಫ್ ಕ್ಲೋಕ್ನ ಸ್ಮಾರ್ಟ್ ಡಿಜಿಟಲ್ ಲಾಕರ್ ಸೌಲಭ್ಯವನ್ನು ಬೆಂಗಳೂರಿನ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದೆ.
ಮೆಜೆಸ್ಟಿಕ್ ಸೇರಿದಂತೆ ಇತರೆ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಈ ಲಾಕರ್ ವ್ಯವಸ್ಥೆ ಸೌಲಭ್ಯ ಆರಂಭಗೊಂಡಿದೆ. ಪ್ರಯಾಣಿಕರ ಮಧ್ಯಮ ಗಾತ್ರದ ಬ್ಯಾಗ್ಗಳನ್ನು ಈ ಸುರಕ್ಷಿತ ಲಾಕರ್ಗಳಲ್ಲಿ ಇರಿಸಬಹುದಾಗಿದ್ದು, 6 ಗಂಟೆಗಳಿಗೆ 70 ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ದೊಡ್ಡ ಗಾತ್ರದ ಬ್ಯಾಗ್ಗಳು 6 ಗಂಟೆ ಕಾಯ್ದಿರಿಸಲು100 ರೂಪಾಯಿ ನಿಗದಿ ಮಾಡಲಾಗಿದೆ.