ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಈಗಾಗಲೇ ಫ್ಲವರ್ ಶೋ ನಡೆಯುತ್ತಿದೆ. ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್ ಶೋ ಪ್ರದರ್ಶನಗೊಳ್ಳುತ್ತಿದೆ. ಇದೀಗ ಫ್ಲವರ್ ಶೋ ವೀಕ್ಷಿಸಲು ತೆರಳುವವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಿಹಿಸುದ್ದಿ ನೀಡಿದೆ. ಆ. 15, 17 ಮತ್ತು 18ರಂದು ಮೆಟ್ರೋದಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ಮೆಟ್ರೋದಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪೇಪರ್ ಟಿಕೆಟ್ ಲಭ್ಯವಾಗಲಿದೆ. ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ 30 ರೂ. ಪೇಪರ್ ಟಿಕೆಟ್ ಪಡೆದು ಪ್ರಯಾಣಿಸಬಹುದೆ. ಎಎಫ್ಸಿ ಗೇಟ್ ಬಳಸಿ ಯಾವುದೇ ನಿಲ್ದಾಣಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.
ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ಖರೀದಿಸಿದ ದಿನದಂದು ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ. ಸಾರ್ವಜನಿಕರು ಟೋಕನ್, ಕಾರ್ಡ್. ಕ್ಯೂಆರ್ ಟಿಕೆಟ್ಗಳ ಮೂಲಕ ಲಾಲ್ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಬಹುದು.