ನಾಗಸಂದ್ರದಿಂದ ಮಾದಾವರದ ನಡುವಿನ ಬಹು ನಿರೀಕ್ಷಿತ ಹಸಿರು ಮಾರ್ಗದಲ್ಲಿ ಭಾನುವಾರ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ನಾಗಸಂದ್ರದಿಂದ 3.14 ಕಿ.ಮೀ ನಡುವೆ ಇಂದು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದ್ದು ಈ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ನಾಗಸಂದ್ರದಿಂದ ಮಾದಾವರ ನಡುವಿನ ಮೆಟ್ರೋ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಅಕ್ಟೋಬರ್ – ನವೆಂಬರ್ ವೇಳೆಗೆ ಆರಂಭವಾಗುವ ಸಾಧ್ಯತೆ ಇದೆ.
ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯವರೆಗೂ ಮೆಟ್ರೋ ಸಂಚಾರವಿದೆ. ಇದೀಗ ಇದಕ್ಕೆ 3.14 ಕಿಮೀ ಉದ್ದದ ಮೆಟ್ರೋ ಮಾರ್ಗ ಸೇರ್ಪಡೆಯಾಗಲಿದೆ. ನಾಗಸಂದ್ರದಿಂದ ಮಾದಾವರ (ಬೆಂಗಳೂರು ಅಂತಾರಾಷ್ಟ್ರೀ ವಸ್ತು ಪ್ರದರ್ಶನ ಮೈದಾನ) ವರೆಗಿನ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಇದೀಗ ಕೌಂಟ್ಡೌನ್ ಶುರುವಾಗಿದೆ.