ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದಾಜ್ಲೆ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಪಿ ರಾಜೀವ್ಗೌಡ ವಿರುದ್ಧ ಜಯ ಸಾಧಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು ಹಿನ್ನೆಲೆ ಲೋಕಸಭಾ ಸದಸ್ಯರ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ದಯಾನಂದ್ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಗೆಲುವು ಬೆಂಗಳೂರು ಉತ್ತರ ಕ್ಷೇತ್ರದ ಜನತೆಗೆ, ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಸೇರಬೇಕು. ಕೇಂದ್ರದಲ್ಲಿ ಮ್ಯಾಜಿಕ್ ನಂಬರ್ ದಾಟಿದ್ದೇವೆ. 272 ಮ್ಯಾಜಿಕ್ ನಂಬರ್ಗೆ 300 ರ ಹತ್ತಿರ ಗೆಲುವು ಸಿಕ್ಕಿದೆ. ನರೇಂದ್ರ ಮೋದಿ ಅವರ ನೇತೃತ್ವದಲಲಿ ಸರ್ಕಾರ ಆಗ್ತಿದೆ. ಈ ದೇಶವನ್ನು ವಿಕಾಸದತ್ತ ಕೊಂಡಯ್ಯಲಿಕ್ಕೆ ಶಕ್ತಿ ಸಿಗಬೇಕು, ನಮ್ಮ ಎನ್ಡಿಎ ಗಿಂತ ದವರಿಂದ ಸಿಗುತ್ತೆ ಎಂಬ ವಿಶ್ವಾಸ ಇದೆ. ಈ ಕ್ಷೇತ್ರದಲ್ಲಿ ಏನೆಲ್ಲಾ ಕೆಲಸಗಳು ಆಗಬೇಕು ಅದೆಲ್ಲವನನು ಪಟ್ಟಿ ಮಾಡಿಕೊಂಡು ಪೂರೈಸುವಂತಹ ಕೆಲಸ ಮಾಡ್ತೀನಿ ಎಂದು ಶೋಭ ಕರಂದ್ಲಾಜೆ ಹೇಳಿದರು.