- ಪಾನಿಪುರಿ ತಿನ್ನುತ್ತಿರಾ ಹಾಗಿದ್ದರೆ ನಿಮ್ಮ ಜೀವಕ್ಕೆ ಕುತ್ತು ಫಿಕ್ಸ್
- ಪಾನಿಪುರಿಯಲ್ಲಿ ಕಾನ್ಸರ್ ಅಂಶ ಪತ್ತೆ
- ಪಾನಿಪುರಿ ತಿನ್ನುವವರಿಗೆ ಶಾಕ್ ನೀಡಲು ಫುಡ್ ಸೆಫ್ಟಿ ಇಲಾಖೆ ಸದ್ದಿಲ್ಲದೆ ತಯಾರಿ
ಬೆಂಗಳೂರು: ಹೆಣೈಕ್ಳೆ ಹುಷಾರ್ ಪಾನಿಪುರಿ ತಿನ್ನುತ್ತಿರಾ ಹಾಗಿದ್ದರೆ ನಿಮ್ಮ ಜೀವಕ್ಕೆ ಕುತ್ತು ಫಿಕ್ಸ್. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಿ ಪಾನಿಪುರಿ ಮಾದರಿಗಳನ್ನ ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಈಗಾಗಲೇ ರಾಜ್ಯ ಸರ್ಕಾರವು ಗೋಬಿ ಮಂಚೂರಿ ಮತ್ತು ಕಬಾಬ್ಗೆ ಬಳಸುವ ಕಾನ್ಸರ್ ಕಾರಕ ಆರ್ಟಿಫಿಶಿಯಲ್ ಬಣ್ಣಗಳನ್ನು ಬ್ಯಾನ್ ಮಾಡಿದೆ. ಆದರೆ ಇದೀಗ ಪಾನಿಪುರಿ ಪ್ರಿಯರಿಗೂ ಶಾಕ್ ನೀಡಲು ಫುಡ್ ಸೆಫ್ಟಿ ಇಲಾಖೆ ಸದ್ದಿಲ್ಲದೆ ತಯಾರಿ ನಡೆಸಿದೆ.
ನಗರದ 49 ಕಡೆಗಳಲ್ಲಿ ಪಾನಿಪುರಿ ತಯಾರಿಕೆಗೆ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹೀಗಾಗಿ ಕ್ಯಾನ್ಸರ್ ಕಾರಕ ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಈ ಕುರಿತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಪ್ರತಿಕ್ರಿಯಿಸಿ, ಪಾನಿಪುರಿ ಬಗ್ಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 243 ಮಾದರಿಗಳನ್ನು ಸಂಗ್ರಹಿಸಿದ್ದೇವು. 41 ಮಾದರಿಗಳಲ್ಲಿ ಅಸುರಕ್ಷಿತ ಅಂತ ಬಂದಿದೆ. 18 ಮಾದರಿಗಳು ಕಳಪೆ ಗುಣಪಟ್ಟದಿಂದ ಕೂಡಿವೆ. ಪಾನಿಪುರಿಯಲ್ಲಿ 4-5 ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಇನ್ನೂ 4-5 ಮಾದರಿಗಳ ಫಲಿತಾಂಶ ಬರಬೇಕಿದೆ. ಅವು ಬಂದ ಬಳಿಕ ಸಭೆ ನಡೆಸಿ, ಬಳಿಕ ಪಾನಿಪುರಿಗೆ ಬಳಸುವ ರಾಸಾಯನಿಕಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ಕಾರ ಹೆಚ್ಚಾಗಿ ತಿನ್ನುವುದರಿಂದ ಅಸಿಡಿಟಿ, ಭೇದಿಯಾಗುತ್ತದೆ. ಹೆಚ್ಚಿಗೆ ಕಾರ ಇರುವ ಪಾನಿಪುರಿಯನ್ನು 5-7 ವರ್ಷ ತಿಂದರೆ ಅಲ್ಸರ್ ಮತ್ತು ಕ್ಯಾನ್ಸರ್ ರೋಗ ಬರುತ್ತದೆ ಎಂದು ತಿಳಿಸಿದರು.