- ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್
- ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ
ಪೆನ್ಡ್ರೈವ್ ಪ್ರಕರಣದ ಆರೋಪಿಯಾಗಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಒಪ್ಪಿಗೆ ನೀಡಿದೆ. ಅತ್ಯಾಚಾರ ಆರೋಪದಲ್ಲಿ ಪ್ರಜ್ವಲ್ ರೇವಣ್ಣಗೆ ಇಂದು ಪುರುಷತ್ವ ಪರೀಕ್ಷೆ ನಡೆಯಲಿದೆ. ಪ್ರಜ್ವಲ್ ಪುರುಷತ್ವ ಪರೀಕ್ಷೆಗೆ ಮಂಗಳವಾರ ಕೋರ್ಟ್ ಪರ್ಮಿಷನ್ ಕೊಟ್ಟಿದೆ.
ಜೂನ್ 6 ರಂದು ಪ್ರಜ್ವಲ್ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆ ಪುರುಷತ್ವ ಪರೀಕ್ಷೆ ನಡೆಸಲು ಎಸ್ ಐ ಟಿ ನಿರ್ಧಾರ ಮಾಡಿದೆ. ಕಾನೂನಿನ ಪ್ರಕಾರ ಅತ್ಯಾಚಾರ ಆರೋಪಿಗಳಿಗೆ ಪುರುಷತ್ವ ಪರೀಕ್ಷೆ ಮಾಡಿಸಲಾಗುತ್ತದೆ. ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಯಲಿದೆ.
ತನಿಖೆಗೆ ಪ್ರಜ್ವಲ್ ಸ್ಪಂದಿಸದ ಹಿನ್ನೆಲೆ ಹಾಸನ ಹಾಗೂ ಬಸವನಗುಡಿಯ ಮನೆಗೆ ಕರೆದೊಯ್ದು ಎಸ್ಐಟಿ ಸ್ಪಾಟ್ ಮಹಜರ್ ನಡೆಸಬೇಕು. ಹೀಗಾಗಿ ನಾಳೆ ಮತ್ತೆ ಕಸ್ಟಡಿಗೆ ಪಡೆಯಲು ಎಸ್ ಐ ಟಿ ನಿರ್ಧಾರ ಮಾಡಿದೆ.