ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್ಐಟಿಗೆ ನಾವು ನೀಡಿದ್ದೇವೆ. ಅದರ ಪ್ರಕಾರ ಎಲ್ಲ ಕ್ರಮ ಕೈಗೊಳ್ಳುತ್ತಾರೆ. ಕಾನೂನು ಚೌಕಟ್ಟಿನಲ್ಲೇ ಕ್ರಮ ಆಗುತ್ತದೆ. ಎಸ್ಐಟಿಯವರಿಗೆ ಕಾರ್ತಿಕ್ ಎಲ್ಲಿದ್ದಾನೆ ಗೊತ್ತಿರುತ್ತದೆ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ. ಇಂಟರ್ ಪೋಲ್ ನವರು ಎಲ್ಲ ದೇಶಗಳಿಗೂ ಕಮ್ಯುನಿಕೇಟ್ ಮಾಡಿ ಲೊಕೇಟ್ ಮಾಡುತ್ತಾರೆ ಎಂದರು.
ಇನ್ನು ಬ್ಲ್ಯೂ ಕಾರ್ನರ್ ಅಂದ್ರೆ ಎಲ್ಲಿದ್ದಾರೆ ಅಂತ ಲೊಕೇಟ್ ಮಾಡ್ತಾರೆ. ಆಮೇಲೆ ಪ್ರಜ್ವಲ್ ರನ್ನು ಹೇಗೆ ಸೆಕ್ಯುರ್ ಮಾಡಿ ಕರೆತರಬೇಕು ಎಂಬ ಬಗ್ಗೆ ಎಸ್ಐಟಿ ನಿರ್ಧಾರ ಮಾಡುತ್ತದೆ. ಸಹಜವಾಗಿ ಜೆಡಿಎಸ್ ನವರಿಗೆ ಬೇಸರ ಆಗಿದೆ. ನಾಳೆ ಎಸ್ಐಟಿ ಮೇಲೂ ಆರೋಪ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಕಾನೂನು ಪ್ರಕಾರವೇ ನಾವು ಕ್ರಮ ಕೈಗೊಳ್ಳುತ್ತೇವೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ನಾಳೆ ಎಸ್ಐಟಿ ಮೇಲೂ ಆಪಾದನೆ ಬರಬಹುದು. ಅದಕ್ಕಾಗಿ ಎಚ್ಚರಿಕೆ ವಹಿಸಿ ಎಸ್ಐಟಿ ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡ್ತಿದ್ದೇವೆ ಎಂದರು.