- ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ವರ್ಗಾವಣೆ
- ರಿಜಿಸ್ಟ್ರಾರ್ ಕಚೇರಿ ಲೆಕ್ಕ ಅಧೀಕ್ಷಕರಾಗಿ ನೇಮಿಸಿ ಸರ್ಕಾರ ಆದೇಶ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರನ್ನ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ರಿಜಿಸ್ಟ್ರಾರ್ ಕಚೇರಿ ಲೆಕ್ಕ ಅಧೀಕ್ಷಕರನ್ನಾಗಿ ನೇಮಿಸಿ ಆದೇಶಿಸಿದೆ. ಸರ್ಕಾರವು ಈ ಹಿಂದೆ ಕೋಲಾರಕ್ಕೆ ವರ್ಗಾವಣೆಗೊಳಿಸಿತ್ತು. ಏಕಾಏಕಿ ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾವಣೆ ಆಗಿತ್ತು. ವರ್ಗಾವಣೆಗೊಳಿಸಿದ್ದರ ವಿರುದ್ಧ ಸಿ.ಎಸ್. ಷಡಕ್ಷರಿ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರದ ಕ್ರಮವನ್ನ ವಿರೋಧಿಸಿದ್ದರು, ಈಗ ಮತ್ತೆ ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಗೆ ವರ್ಗಾವಣೆಗೊಳಿಸಿ ಎಂದು ಆದೇಶಿಸಿದೆ.
ಅಧಿಕೃತ ಜ್ಞಾಪನದಲ್ಲಿ ಏನಿದೆ..?
ಉಲ್ಲೇಖಿತ ಸರ್ಕಾರ ಪತ್ರದಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅರ್ಜಿ ಸಂ: 4799/2023 ರಲ್ಲಿನ ತೀರ್ಪು ದಿನಾಂಕ : 04 .01.2024 ರಲ್ಲಿನ ನಿರ್ದೇಶನದ ಅನುಸಾರ ಶ್ರೀ ಸಿ.ಎಸ್ ಷಡಾಕ್ಷರಿ, ಲೆಕ್ಕಾಧಿಕ್ಷಕರು ಇವರನ್ನು ಕೋಲಾರಕ್ಕೆ ವರ್ಗಾವಣೆಗೊಳಿಸಿರುವ ಆದೇಶವನ್ನು ಮತ್ತು ಸದರಿಯವರ ಮನವಿ ಮನವಿ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಇವರನ್ನು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಖಾಲಿಯಿರುವ ಲೆಕ್ಕಾಧಿಕ್ಷಕರ ಹುದ್ದೆ / ಸ್ಥಳಕ್ಕೆ ವರ್ಗಾಯಿಸಲು ಅನುಮೋದನೆ ನೀಡಲಾಗಿದೆ.
ಸದರಿ ಸರ್ಕಾರದ ಅನುಮೋದನೆಯನ್ವಯ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗ್ರೂಪ್ “ಬಿ” ವೃಂದದ ಈ ಕೆಳಕಂಡ ಲೆಕ್ಕಾಧಿಕ್ಷಕರನ್ನು ಅವರ ಹೆಸರಿನ ಮುಂದೆ ತೋರಿಸುವ ಅಂಕಣ (2) ರಿಂದ (3) ಕಚೇರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.