ಕರ್ನಾಟಕದಲ್ಲಿ ಆಗುತ್ತಿರುವ ಕೊಲೆಗಡಕರಿಗೆ ಮುಖ್ಯಮಂತ್ರಿಗಳು ಧನ್ಯವಾದ ಹೇಳಿದ್ದಾರೋ ಗೊತ್ತಿಲ್ಲ. ಆದ್ರೆ ರಾಜ್ಯದ ಜನತೆಗೆ ಧನ್ಯವಾದ ಹೇಳಿದ್ದಾರೆ. ಅವರ ಅವಧಿ ಮುಗಿದು ಅನ್ನೋದಕ್ಕೆ ಬೈ ಬೈ ಹೇಳ್ತಿದ್ದಾರೋ ಗೊತ್ತಿಲ್ಲ. ಒಂದು ವರ್ಷ ಖಜಾನೆ ಖಾಲಿ ಖಾಲಿ, ಕಾಂಗ್ರೆಸ್ ಸರ್ಕಾರ ಲೂಟಿಗೆ ಎಷ್ಟು ಕೋಟಿ ಎಂದು ಜನರು ಇದನ್ನು ಲೆಕ್ಕ ಹಾಕುತ್ತಿದ್ದಾರೆ. ಕಾಂಗ್ರೆಸ್ ಒಂದು ವರ್ಷ ಕೊಲೆಗಡುಕರಿಗೆ ಹರ್ಷ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದರು.