- ಸಿದ್ದರಾಮಯ್ಯ ಒಬ್ಬ ಕಾಮ್ ಚೋರ್ ಆಗಿದ್ದು, ಮೋದಿಗೆ ಹೋಲಿಕೆ ಸಲ್ಲದು
- ಬಿಜೆಪಿ ನಾಯಕ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಬೆಂಗಳೂರು : ರಾಜ್ಯದಲ್ಲಿ ಬರ, ಜನರಿಗೆ ನೀರಿಲ್ಲ, ಗೋವುಗಳಿಗೆ ಮೇವಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಆರಾಮಾಗಿ ರೆಸಾರ್ಟ್ ನಲ್ಲಿ ಇದ್ದಾರೆ. ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.. ರೈತರಿಗೆ ಪರದಾಟ.. ಸಿದ್ದರಾಮಯ್ಯನವರಿಗೆ ಮೋಜಿನ ಆಟ.. ಸಿದ್ದರಾಮಯ್ಯ ಒಬ್ಬ ಕಾಮ್ ಚೋರ್ ಆಗಿದ್ದು, ಮೋದಿಗೆ ಹೋಲಿಕೆ ಸಲ್ಲದು ಎಂದು ಬಿಜೆಪಿ ನಾಯಕ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ಸಾಗರೋತ್ತರ ಅಧ್ಯಕ್ಷ ಹೇಳಿಕೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಾಲಿಗೆ ಈ ಪಿತ್ರೋಡಾ ಒಂಥಾರ ವಡೆ ಇದ್ದಂತೆ. ನಮ್ಮ ಕಡೆ ವಡೆ ಅಂತಾರೆ ಇವರೇ ಪಿತ್ರೋಡಾ.. ಕಾಂಗ್ರೆಸ್ ಮನಸ್ಥಿತಿ ಏನು ಅನ್ನೋದು ಇವರ ಹೇಳಿಕೆಯಿಂದ ಗೊತ್ತಾಗುತ್ತೆ. ಸ್ಯಾಮ್ ಪಿತ್ರೋಡಾ ಒಬ್ಬ 420. ಈಗ ಅವನು ರಾಜೀನಾಮೆ ಕೊಟ್ಟಿದ್ದಾನೆ. ಆದ್ರೆ ಈ ವಿಚಾರ ಇಲ್ಲಿಗೆ ಮುಗಿಯೋದಿಲ್ಲ ಎಂದರು.
ದಕ್ಷಿಣ ಭಾರತದವರೆಲ್ಲ ಅಫ್ರೀಕಾದವರು ಎಂದು ಹೇಳಿಕೆ ನೀಡಿದ್ದರು. ನಮ್ಮ ಬಣ್ಣದ ಮೇಲೆ ಇವರು ತೀರ್ಮಾನ ಮಾಡ್ತಾರೆ ಎಂದರೆ. ಇಲ್ಲಿ ವಾಸಿಸುವ ಒಕ್ಕಲಿಗ ಲಿಂಗಾಯತ ಎಲ್ಲರಿಗೂ ಯಾವ ಬಣ್ಣ ಹಚ್ಚುತ್ತೀರಾ..? ಹಿಂದುಳಿದವರಿಗೆ ಯಾವ ಬಣ್ಣ ಹಚ್ಚುತ್ತೀರಾ..? ಸೋನಿಯಾ ಗಾಂಧಿ ಯಾರು..? ಅವರದ್ದು ಯಾವ ಬಣ್ಣ.? ಯಾವ ದೇಶದಿಂದ ಬಂದಿದ್ದಾರೆ ಹೇಳಲಿ ಎಂದು ಸ್ಯಾಮ್ ಪಿತ್ರೋಡಾ ವಿರುದ್ಧ ಕಿಡಿಕಾರಿದರು.
ಸ್ಯಾಮ್ ಪಿತ್ರೋಡಾ ಇದೇ ಮೊದಲು ಬಾರಿಗೆ ಈ ರೀತಿಯ ಹೇಳಿಕೆ ಕೊಟ್ಟಿಲ್ಲ. ಈ ಹಿಂದೆಯೂ ಹಲವಾರು ಬಾರಿ ಈ ರೀತಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದಿದ್ದರು. ಈಗ ಈ ಮಾಡ್ರಾನ್ ಕಾಂಗ್ರೆಸ್, ಸ್ವಂತ ಆಸ್ತಿಯಲ್ಲಿ ಹಕ್ಕಿಲ್ಲ ಅಂತಿದ್ದಾರೆ. ಸ್ಯಾಮ್ ಪಿತ್ರೋಡಾ ರಾಜೀನಾಮೆ ಅಲ್ಲ, ಅವರನ್ನ ವಜಾ ಮಾಡಬೇಕಿತ್ತು. ನಾವು ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.