ಬಿಸಿಲಿನ ಧಗೆಗೆ ಕಂಗಲಾಗಿದ್ದ ಬೆಂಗಳೂರಿನ ಮಂದಿಗೆ ಮತ್ತೆ ತಂಪೆರದ ವರುಣ. ಅಲಿಕಲ್ಲು ಮಳೆ ಆಗಿ ಸಿಲಿಕಾನ್ ಸಿಟಿಯ ಉಷ್ಣಾಂಶ ಕಮ್ಮಿ ಆಗಿತ್ತು. ಆದ್ರೆ ನಿನ್ನೆ ಮಳೆ ಬರುವ ಮೂನ್ಸೂಚನೆ ಸಹ ಇರಲಿಲ್ಲ. ಜನ ಮಳೆರಾಯನಿಗೆ ಕಾದು ಕಾದು ಸುಸ್ತಾಗಿದ್ರು. ಆದ್ರೆ ಇಂದು ಸಂಜೆ ಮಳೆರಾಯನ ಎಂಟ್ರಿ ಇಂದ ಬೆಂಗಳೂರು ಮಂದಿ ಕುಣಿದು ಕುಪ್ಪಳಿಸಿದ್ದಾರೆ. ಕೆ. ಆರ್ ಸರ್ಕಲ್, ಜೆ. ಸಿ ರಸ್ತೆ, ಮೈಸೂರ್ ಬ್ಯಾಂಕ್ ಸರ್ಕಲ್ ಸುತ್ತಮುತ್ತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಇನ್ನು ಮೂರು ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿತ್ತು. ಬೆಂಗಳೂರಿನಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.