ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ವಾಯುಭಾರ ಕುಸಿತದ ಈ ಎಫೆಕ್ಟ್ ಕೇವಲ ಚೆನ್ನೈಗೆ ಮಾತ್ರವಲ್ಲ ಬೆಂಗಳೂರಿಗೆ ತಟ್ಟಿದೆ. ಇಂದು ಬೆಳಗ್ಗೆಯಿಂದಲೂ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಆವರಿಸಿತ್ತು. ಸಂಜೆ ನಗರದ ಕೆಲವೆಡೆ ಮಳೆಯಾಗಿದ್ದು, ನಾಳೆ ಕೂಡ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದೆ.
ಬಂಗಾಳ ಉಪಸಾಗರದ ಆಗ್ನೇಯ ಭಾಗದಲ್ಲಿ ಸರ್ಕ್ಯುಲೇಶನ್ ಇತ್ತು. ಇದರ ಪರಿಣಾಮ ಲೋ ಪ್ರೆಸ್ಸೆಸ್ ಸಿಸ್ಟಮ್ ಆಗಿದೆ. ಈ ಲೋ ಪ್ರೆಸ್ಸೆಸ್ ಸಿಸ್ಟಮ್ ಡಿಪ್ರೆಸ್ ಆಗುವ ಅವಕಾಶಗಳಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಳೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ- ಮೈಸೂರು, ಚಾಮರಾಜನಗರ, ಕೊಡಗಿನಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.