ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ವರುಣನ ಅಬ್ಬರ ಶುರುವಾಗಿದೆ. ನಗರದ ಮಲ್ಲೇಶ್ವರಂ, ಯಶವಂತಪುರ, ಮೆಜೆಸ್ಟಿಕ್, ಯಲಹಂಕ, ಜಕ್ಕಸಂದ್ರ, ವೈಟ್ಫೀಲ್ಢ್, ಮಹಾಲಕ್ಷ್ಮೀ ಲೇಔಟ್, ಬಿಟಿಎಂ ಲೇಔಟ್ ನಗರದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಲವು ರಸ್ತೆಗಳು ಜಲವೃತಗೊಂಡಿದ್ದು, ವಾಹನ ಸವಾರರು ಹಾಗೂ ದಾರಿ ಹೋಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಈಗಾಗಲೇ ರಾಜ್ಯಕ್ಕೆ ಮಾನ್ಸೂನ್ ಎಂಟ್ರಿಯಾಗುವ ಸಾಧ್ಯತೆ ಇದ್ದು, ನಗರದೆಲ್ಲೆಡೆ ಭಾರೀ ಮಳೆ ಗೋಚರಿಸುವ ಸಂಭವವಿದೆ. ಇಂದಿನಿಂದ ಐದು ದಿನ ನಗರದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್ ಹೇಳಿದ್ದಾರೆ.