ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಿದೆ. ಬೆಂಗಳೂರಿನ ಹಲವು ಕಡೆ ಇಂದು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಟ, ಮಟ ಮಧ್ಯಾಹ್ನ ಗಾಳಿ ಸಹಿತ ಭರ್ಜರಿ ಮಳೆಯಾಗಿದೆ.
ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಜೋರು ಮಳೆ ಆಗಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ನಾಗರಭಾವಿ, ವಿಜಯನಗರ, ಗೋವಿಂದರಾಜ ನಗರ, ಮಾಗಡಿ ರಸ್ತೆ, ಟೋಲ್ ಗೇಟ್, ಸುಮ್ಮನಹಳ್ಳಿ ಜಂಕ್ಷನ್, ಇಂದಿರಾನಗರ, HAL ರೋಡ್, ಮಾರತ್ ಹಳ್ಳಿ ಸುತ್ತಾಮುತ್ತಾ ಮಳೆಯಾಗಿದೆ.
ಇದನ್ನು ಓದಿ:ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ..!
ಇಂದು ಸಂಜೆ ನಗರದ ಬಹುತೇಕ ಕಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಮುನ್ಸೂಚನೆಯಂತೆ ನಗರದ ಕೆಲವೆಡೆ ಸಂಜೆ ಹೊತ್ತಿಗೆ ಮಳೆ ಸುರಿದಿದೆ. ತಂಪು ವಾತಾವರಣ ಸಿಲಿಕಾನ್ ಸಿಟಿಯನ್ನು ಕೂಲ್ ಮಾಡಿದ್ರೆ ನಗರದ ಕೆಲವೆಡೆ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಇದನ್ನು ಓದಿ: KSRTC ಗೆ ಹೊಸ ಐಶಾರಾಮಿ ಬಸ್ ಸೇರ್ಪಡೆ..!
ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಮತ್ತು ಎಚ್ಚರಿಕೆಯನ್ನು ನೀಡಿದೆ. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡ ಮಲೆನಾಡು ಜಿಲ್ಲೆಗಳಿಗೆ ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದ ದಿನಗಳಲ್ಲಿ ಮಳೆ ಕಡಿಮೆ ಇರುವ ಸಾಧ್ಯತೆಯಿದೆ.