ರಾಜ್ಯಾದ್ಯಂತ ಉರಿ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ನಿನ್ನೆ ಬೆಂಗಳೂರಿನ ಹಲವೆಡೆ ಮಳೆಯಾಗಿತ್ತು. ಇಂದು ಕೂಡ ನಗರದಲ್ಲಿ ಗುಡುಗು ಸಹಿತ ಮಳೆರಾಯನ ಸಿಂಚನವಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ರೇಸ್ಕೋರ್ಸ್ ರೋಡ್, ಕೆಆರ್ಪುರಂ ವೈಟ್ಫಿಲ್ಡ್ ಸೇರಿದಂತೆ ನಗರದ ಹಲವೆಡೆ ಮಳೆ ಸುರಿಯುತ್ತಿದೆ. ಇನ್ನು ಮಳೆ ಹಿನ್ನೆಲೆ ಉಷ್ಣಾಂಶದಲ್ಲಿ ಇಳಿಕೆ ಆಗಿದೆ.